Connect with us

Bengaluru City

ಸಿಎಂ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್‍ಗೆ ಹದ್ದು ಡಿಕ್ಕಿ- ಪೈಲೆಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

Published

on

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಹದ್ದು ಡಿಕ್ಕಿ ಹೊಡೆದ ಘಟನೆ ನಗರದ ಹೆಚ್‍ಎಎಲ್ ವಿಮಾನ ನಲ್ದಾಣದಲ್ಲಿ ನಡೆದಿದೆ.

ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಪರಮೇಶ್ವರ್ ಹೆಲಿಕಾಪ್ಟರ್ ಮೂಲಕ ಶ್ರವಣ ಬೆಳಗೂಳಕ್ಕೆ ತೆರಳುತ್ತಿದ್ದರು. ಆದ್ರೆ ಹೆಲಿಕಾಪ್ಟರ್ ಟೇಕ್ ಅಫ್ ಆದ ಕೆಲಹೊತ್ತಿನಲ್ಲೆ ಹದ್ದು ಡಿಕ್ಕಿ ಹೊಡೆದಿದೆ. ಕೂಡಲೇ ಪೈಲೆಟ್ ಹೆಲಕಾಪ್ಟರ್ ಭೂಸ್ಪರ್ಶ ಮಾಡಿ ಸಮಯ ಪ್ರಜ್ಞೆ ಮೆರೆದಿದ್ದು, ಅನಾಹುತ ತಪ್ಪಿದೆ.

ನಂತರ ಸಿಬ್ಬಂದಿ ಹೆಲಿಕಾಪ್ಟರ್‍ನ ತಾಂತ್ರಿಕ ಪರಿಶೀಲನೆ ನಡೆಸಿದ್ದು, ಬಳಿಕ ಸಿಎಂ ಹಾಗೂ ಪರಮೇಶ್ವರ್ ಹೆಲಿಕಾಪ್ಟರ್‍ನಲ್ಲಿ ಹಾಸನಕ್ಕೆ ಪ್ರಯಾಣ ಬೆಳೆಸಿದ್ರು.

ಈ ಬಗ್ಗೆ ಶ್ರವಣಬೆಳಗೊಳದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಬೆಂಗಳೂರಿನಲ್ಲಿ ನಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‍ಗೆ ಪಕ್ಷಿ ಡಿಕ್ಕಿ ಹೊಡೆಯಿತು. ಅದು ಯಾವ ಹಕ್ಕಿ ಅಂತ ನನಗೆ ಗೊತ್ತಿಲ್ಲ ಅಂದ್ರು. ಹೆಚ್.ವಿಶ್ವನಾಥ್ ಕಾಂಗ್ರೆಸ್ ಬಿಡುವುದು ನನಗೆ ಗೊತ್ತಿಲ್ಲ. ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡಲಿದೆ. ರೈತರ ಸಾಲ ಮನ್ನಾ ಮೊದಲು ಕೇಂದ್ರ ಸರ್ಕಾರ ಮಾಡಲಿ ಅಂದ್ರು.

2018ರ ಫೆಬ್ರವರಿಯಲ್ಲಿ ನೆಡೆಯಲಿರುವ ಮಹಾಮಸ್ತಕಾಭೀಷೇಕ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಇಂದು ಶ್ರವಬೆಳಗೊಳಕ್ಕೆ ಭೇಟಿ ನೀಡಿದ್ದು, 71 ಕೋಟಿ ರೂ. ವೆಚ್ಚದ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಾಸನದ ಶ್ರವಣಬೆಳಗೊಳ ಅಂತರಾಷ್ಟ್ರೀಯ ಪ್ರವಾಸಿ ಮಂದಿರ, ವಿದ್ಯುತ್ ವಿತರಣಾ ಕೇಂದ್ರ, ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.

https://www.youtube.com/watch?v=bvIVpl-Cs2g

Click to comment

Leave a Reply

Your email address will not be published. Required fields are marked *