ವಾಷಿಂಗ್ಟನ್: ಪೈಲಟ್‌ಗಳಿಲ್ಲದೇ ಸ್ವತಂತ್ರವಾಗಿ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಒಂದು ಹಾರಾಟ ನಡೆಸಿದೆ. ಪೈಲಟ್ ರಹಿತ ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ 30 ನಿಮಿಷಗಳ ಕಾಲ ಆಕಾಶದಲ್ಲಿ ಸ್ವತಂತ್ರವಾಗಿ ಹಾರಾಟ ನಡೆಸಿದೆ.
ಅಲಿಯಾಸ್ ಎಂಬ ಅಮೆರಿಕಾ ರಕ್ಷಣಾ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಸಂಪೂರ್ಣ ಕಂಪ್ಯೂಟರ್-ಚಾಲಿತ ಹೆಲಿಕಾಪ್ಟರ್‌ಅನ್ನು ಫೆಬ್ರವರಿ 5 ರಂದು ಪರೀಕ್ಷಿಸಲಾಯಿತು. ಮೊದಲ ಪರೀಕ್ಷಾರ್ಥ ಹಾರಾಟದಲ್ಲಿ, ಮಾನವರಹಿತ ಬ್ಲ್ಯಾಕ್ ಹಾಕ್ ಸುಮಾರು 4,000 ಅಡಿ ಎತ್ತರದಲ್ಲಿ ಹಾಗೂ ಗಂಟೆಗೆ ಸುಮಾರು 115 ರಿಂದ 125 ಮೈಲುಗಳ ವೇಗದಲ್ಲಿ ಹಾರಿದೆ. ಇದನ್ನೂ ಓದಿ: ಹಿಜಬ್ ನಿಷೇಧ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ: ಅಮೆರಿಕ
Advertisement
WATCH: A Black Hawk helicopter flew for the first time without pilots in Kentucky. The aircraft flew for 30 minutes through a simulated cityscape avoiding imagined buildings before performing a perfect landing pic.twitter.com/SD01LWhUZe
— Reuters Asia (@ReutersAsia) February 12, 2022
Advertisement
ಪೈಲಟ್ ರಹಿತ ಹೆಲಿಕಾಪ್ಟರ್ ತಯಾರಿಕೆಗೆ ಮುಖ್ಯ ಕಾರಣ ಸುರಕ್ಷತೆ ಹಾಗೂ ಭೂಮಿಗೆ ಅಪ್ಪಳಿಸುವಂತಹ ಅನಾಹುತಗಳನ್ನು ತಪ್ಪಿಸುವುದು, ಇನ್-ಫ್ಲೈಟ್ ನೆರವು ಹಾಗೂ ಕಡಿಮೆ ವೆಚ್ಚ ಎಂದು ಅಲಿಯಾಸ್ ಪ್ರೋಗ್ರಾಂ ಮ್ಯಾನೇಜರ್ ಸ್ಟುವರ್ಟ್ ಯಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಮಗಳ ವಯಸ್ಸಿನ ಹುಡುಗಿ ಜೊತೆಗೆ ವಿವಾಹವಾದ ಪಾಕ್ ಸಂಸದ
Advertisement
ಈ ಹೆಲಿಕಾಪ್ಟರ್ ಸೇನಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡುತ್ತದೆ. ಇದು ಹಗಲು ಹಾಗೂ ರಾತ್ರಿಯ ಹೊತ್ತು ಪೈಲಟ್ ಇದ್ದು ಅಥವಾ ಇಲ್ಲದೆಯೂ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.