ಶಿವಮೊಗ್ಗ: ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, 7 ಜನರು ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ಜಿಲ್ಲೆಯ ಹೊಸನಗರ (Hosanagar) ತಾಲೂಕಿನ ಚಿಕ್ಕಪೇಟೆ (Chikkapete) ನಗರದಲ್ಲಿ ಈ ಘಟನೆ ನಡೆದಿದ್ದು, ಚಿಕ್ಕಪೇಟೆನಗರದ ಭಾಷಾ ಎಂಬುವವರ ಮನೆ ಸಮೀಪ ಸಂಜೆ 5 ಗಂಟೆ ಸುಮಾರಿಗೆ ಹೆಜ್ಜೇನು ದಾಳಿ ನಡೆಸಿದೆ.ಇದನ್ನೂ ಓದಿ:ನಾಲ್ಕು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ವಿವಿಐಪಿ ಪ್ರದೇಶದಲ್ಲಿ ಶವವಾಗಿ ಪತ್ತೆ
ಭಾಷಾ, ಪತ್ನಿ ಅಸ್ಮಾ, ಮಕ್ಕಳಾದ ಆರೀಫ್, ಅನೀಫ್, ಭಾಷಾ ಪಕ್ಕದ ಮನೆ ನಿವಾಸಿ ಯಾಸೀನ್, ಹಾಸಿಗೆ ರಿಪೇರಿಗಾಗಿ ತೆರಳಿದ್ದ ಹುಸೇನ್ ಸಾಬ್, ಬಾಬಾ ಸಾಬ್ ಮೇಲೆ ದಾಳಿ ನಡೆಸಿದೆ. ಗಾಯಾಳುಗಳನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಸೇನ್ ಸಾಬ್ (68) ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.
ಅದೇ ದಿನ ಮತ್ತೇ ಹೆಜ್ಜೇನು ದಾಳಿ ನಡೆಸಿದ್ದು, ಭಾಷಾ ಪುತ್ರ ಆರೀಫ್ ಮೇಲೆ ಮತ್ತೆ ದಾಳಿಸಿದೆ. ಒಂದೇ ದಿನ ಎರಡು ಬಾರಿ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.ಇದನ್ನೂ ಓದಿ: ಮುಂಬೈ ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ