ಚಿತ್ರರಂಗದಲ್ಲಿ ಸದ್ಯ ಲವ್ ಬರ್ಡ್ಸ್ ಎಂದೇ ಹೈಲೆಟ್ ಆಗಿರುವ ಜೋಡಿ ಅಂದರೆ ತಮಿಳು ಸಿದ್ಧಾರ್ಥ್ (Actor Siddarth) ಮತ್ತು ಅದಿತಿ ರಾವ್ ಹೈದರಿ. ಇಬ್ಬರೂ ಇತ್ತೀಚೆಗೆ ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಇಟಲಿಗೆ ಹಾರಿದ್ದಾರೆ. ಸಿದ್ಧಾರ್ಥ್ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನು ‘ಹೀರಾಮಂಡಿ’ (Heeramandi) ನಟಿ ಅದಿತಿ (Aditi Rao Hydari) ಹಂಚಿಕೊಂಡಿದ್ದಾರೆ.
ಸಾಕಷ್ಟು ಸಮಯದಿಂದ ಇಬ್ಬರ ಡೇಟಿಂಗ್ ಬಗ್ಗೆ ಭಾರೀ ಸುದ್ದಿಯಾಗಿತ್ತು. ಆದರೆ ಇಬ್ಬರೂ ಈ ಬಗ್ಗೆ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿದ್ದರು. ಅದ್ಯಾವಾಗ ಈ ಜೋಡಿ ಬಗ್ಗೆ ಎಂಗೇಜ್‌ಮೆಂಟ್ ಬಗ್ಗೆ ಸುದ್ದಿ ವೈರಲ್ ಆಯ್ತೋ ಆಗ ನಿಶ್ಚಿತಾರ್ಥ ಆಗಿರುವ ಬಗ್ಗೆ ಅಧಿಕೃತ ಘೋಷಣೆ ಮಾಡುವ ಮೂಲಕ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದರು. ಈಗ ಮದುವೆಗೂ ಮುನ್ನ ಸಿದ್ಧಾರ್ಥ್ ಮತ್ತು ಅದಿತಿ ಜೋಡಿ ಇಟಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಇಬ್ಬರೂ ಜಾಲಿಯಾಗಿ ಟ್ರಿಪ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಸಾಮಾನ್ಯರಂತೆ ರೋಡ್ ಸೈಡ್‌ನಲ್ಲಿ ಸ್ನೇಹಿತರ ಜೊತೆ ಚಾಟ್ಸ್ ಸವಿದ ಧ್ರುವ ಸರ್ಜಾ
View this post on Instagram
ಇಟಲಿಯಲ್ಲಿ ಸುಂದರ ಜಾಗಗಳಿಗೆ ಸಿದ್ಧಾರ್ಥ್ ಜೋಡಿ ಭೇಟಿ ನೀಡಿದ್ದಾರೆ. ಇಬ್ಬರೂ ವೆಕೇಷನ್ ಮೂಡ್‌ಗೆ ಜಾರಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡ್ತಿದ್ದಂತೆ ಮದುವೆ ಮುಂಚೆನೇ ಹನಿಮೂನ್ ಮಾಡ್ತಿಕೊಳ್ತಿದ್ದೀರಾ ಎಂದು ಸಿದ್ಧಾರ್ಥ್ ಮತ್ತು ಅದಿತಿಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ಸದ್ಯ ನಟಿ ಅದಿತಿ ಹೀರಾಮಂಡಿ ನಂತರ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಇಂಡಿಯನ್ 2’ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ಸಿದ್ಧಾರ್ಥ್ ಕೈಯಲ್ಲಿವೆ. ಇದರ ನಡುವೆ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡ್ತಾರಾ? ಎಂದು ಕಾದುನೋಡಬೇಕಿದೆ.