ನವದೆಹಲಿ: ಸರಳ ವ್ಯಕ್ತಿತ್ವದ ಹೀರಾಬೆನ್ ಮೋದಿ (Heeraben Modi) ಯವರು ತಮ್ಮ ಪುತ್ರ, ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾ ವಿರಳ.
ಹೌದು. ಎರಡು ಬಾರಿ ಮಾತ್ರ ಮಗನ ಜೊತೆ ಹೀರಾಬೆನ್ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಮಗ ವಿಶ್ವವಿಖ್ಯಾತನಾಗಿದ್ರೂ ಎಂದೂ ಮಗನ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಹೀರಾಬೆನ್ ಅವರು ಪೋಸ್ ಕೊಟ್ಟವರಲ್ಲ.
Advertisement
Advertisement
ಏಕತಾ ಯಾತ್ರೆ ಪೂರ್ಣಗೊಳಿಸಿ, ಲಾಲ್ ಛೌಕದಲ್ಲಿ ರಾಷ್ಟ್ರೀಯ ಧ್ವಜವನ್ನು ಹಾರಿಸಿ, ಶ್ರೀನಗರದಿಂದ ವಾಪಸ್ ಆದ ಬಳಿಕ ಅಹಮದಾಬಾದ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಹಣೆಗೆ ತಾಯಿ ತಿಲಕವನ್ನಿಟ್ಟಿದ್ದರು. ಎರಡನೇ ಬಾರಿ, 2001ರಲ್ಲಿ ಮೊದಲ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಸಂದರ್ಭದಲ್ಲಿ ಮೋದಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದನ್ನೂ ಓದಿ: ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ
Advertisement
Advertisement
ಅದಾದ ಬಳಿಕ ರಾಜಕೀಯ ಕಾರ್ಯಕ್ರಮದಲ್ಲಿ ಹೀರಾಬೆನ್ ತಮ್ಮ ಪುತ್ರನ ಜೊತೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಮನೆಗೆ ಬಂದಾಗ ಮಾತ್ರ ಮಗನೊಂದಿಗೆ ಕುಶಲೋಪರಿ ವಿಚಾರಿಸುತ್ತಿದ್ದರು. ಶತಾಯುಷಿ ತಾಯಿಯ ಬಗ್ಗೆ ಪ್ರಧಾನಿ ಮೋದಿ (Narendra Modi) ಸದಾ ಹೆಮ್ಮೆ ಪಡುತ್ತಿದ್ದರು. ಇದನ್ನೂ ಓದಿ: ಅಮ್ಮನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ಮೋದಿ
ಕರ್ತವ್ಯ ನಿಷ್ಠ ನಾಗರಿಕರಾಗಿದ್ದ ಮೋದಿ ತಾಯಿ, ಮತದಾನ (Vote) ದ ಮಹತ್ವವನ್ನು ಅದ್ಭುತವಾಗಿ ಅರಿತಿದ್ದರು. ಹೀರಾಬೆನ್ ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ವರೆಗೂ ಚುನಾವಣೆಗಳು ಆರಂಭವಾದಾಗಿನಿಂದಲೂ ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರಂತೆ. ಇದುವರೆಗೂ ಮತದಾನವನ್ನು ಮಿಸ್ ಮಾಡದ ಮೋದಿ ತಾಯಿ, ಮೊನ್ನೆ ಕೂಡ ಗುಜರಾತ್ ಚುನಾವಣೆ (Gujarat Election) ಯಲ್ಲಿ ವೀಲ್ ಚೇರ್ ನಲ್ಲಿ ಬಂದು ಮತದಾನ ಮಾಡಿ ಗಮನಸೆಳೆದಿದ್ದರು.