ಹೀರ್ ಎಕ್ಸ್‌ಪ್ರೆಸ್ ಟೀಸರ್‌ಗೆ ಭಾರೀ ಮೆಚ್ಚುಗೆ

Public TV
1 Min Read
Heer Express teaser

`ಹೀರ್ ಎಕ್ಸ್‌ಪ್ರೆಸ್‌ʼ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಸಖತ್ ಅಟ್ರ್ಯಾಕ್ಟ್ ಮಾಡ್ತಿದೆ. `ಓ ಮೈ ಗಾಡ್’ ಹಾಗೂ `102 ನಾಟ್ ಔಟ್’ ಸಿನಿಮಾ ನಿರ್ದೇಶಕ ಉಮೇಶ್ ಶುಕ್ಲಾ ನಿರ್ದೇಶನದ ಹೀರ್ ಎಕ್ಸ್‌ಪ್ರೆಸ್ ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ. ಸಿನಿಮಾದ ಟೀಸರ್ ಜೀ ಮ್ಯೂಸಿಕ್ ಕಂಪನಿಯಲ್ಲಿ ರಿಲೀಸ್ ಆಗಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗ್ತಿದೆ.

ಅಂದ‌ ಹಾಗೆ ಸಿನಿಮಾ ಇದೇ ಆಗಸ್ಟ್ 8ಕ್ಕೆ ದೇಶದಾದ್ಯಂತ ತೆರೆಗೆ ಬರಲಿದೆ. ದಿವಿತಾ ಜುನೇಜಾ ಹಾಗೂ ಪ್ರೀತ್ ಕಮಾನಿ ಮುಖ್ಯ ಪಾತ್ರದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಇನ್ನುಳಿದಂತೆ ಈ ಸಿನಿಮಾದಲ್ಲಿ ಅಶುತೋಶ್ ರಾಣಾ, ಗುಲ್ಶನ್ ಗ್ರೋವರ್, ಸಂಜಯ್ ವಿಶ್ವಾಸ್, ದೀಪಿಕಾ ಸೇರಿದಂತೆ ದೊಡ್ಡ ತಾರಾಗಣವಿದೆ.

ಚಿತ್ರಕ್ಕೆ ನಿರ್ದೇಶಕ ಉಮೇಶ್ ಶುಕ್ಲಾ, ಅಶಿಶ್ ವಾಘ್, ಸಂಜಯ್ ಗ್ರೋವರ್ ಹಾಗೂ ಮೋಹಿತ್ ಛಾಬ್ರಾ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ. ಸದ್ಯ ಚಿತ್ರದ ಟೀಸರ್‌ಗೆ ಪ್ರಶಂಸೆಗಳ ಸುರಿಮಳೆ ಬರುತ್ತಿದ್ದು, ಆಗಷ್ಟ್‌ನಲ್ಲಿ ಸಿನಿಮಾ ಗ್ರ್ಯಾಂಡ್ ಆಗಿ ತೆರೆಗಪ್ಪಳಿಸಿಲಿದೆ.

Share This Article