ಮಗನ ಲೇಟೆಸ್ಟ್‌ ಫೋಟೋ ಶೇರ್‌ ಮಾಡಿದ ‘ಹೆಬ್ಬುಲಿ’ ನಟಿ

Public TV
1 Min Read
amala paul

ನ್ನಡದ ‘ಹೆಬ್ಬುಲಿ’ (Hebbuli) ನಟಿ ಅಮಲಾ ಪೌಲ್ (Amala Paul) ಅವರು ಸದ್ಯ ಮಗನ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ನಡುವೆ ಮಗನ ಜೊತೆ ನಟಿ ಸಮಯ ಕಳೆಯುತ್ತಿದ್ದಾರೆ. ಗುಂಡಾಗಿರುವ ಮುದ್ದಾದ ಮಗನ (Son) ಮುದ್ದಾದ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

amala paul 1

ಜೂನ್‌ನಲ್ಲಿ ಅಮಲಾ ಗಂಡು ಮಗುವಿಗೆ ಜನ್ಮ ನೀಡಿದರು. ಮಗನ ಎಂಟ್ರಿಯಿಂದ ನಟಿಯ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಮುದ್ದಾಗಿರುವ ಮಗನ ಜೊತೆಗಿನ ಲೇಟೆಸ್ಟ್ ಫೋಟೋವೊಂದನ್ನು ನಟಿ ಹಂಚಿಕೊಂಡಿದ್ದಾರೆ. ಅಮಲಾ ಮಗನ ಲುಕ್ಸ್‌ಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ಇದನ್ನೂ ಓದಿ:‘ಅಖಂಡ 2’ ಚಿತ್ರಕ್ಕಾಗಿ ಬೋಯಪತಿ ಶ್ರೀನು ಜೊತೆ ಕೈಜೋಡಿಸಿದ ಬಾಲಯ್ಯ

amala paul

ಇತ್ತೀಚೆಗೆ ಓಣಂ ಹಬ್ಬದಂದು ಮಗನ ಮುಖವನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದರು. ಹೊಸ ಫೋಟೋಶೂಟ್‌ನಲ್ಲಿ ದೋಣಿಯಲ್ಲಿ ಕುಳಿತು ಪತಿ ಮತ್ತು ಮಗನ ಜೊತೆ ನಟಿ ಕ್ಯಾಮೆರಾಗೆ ಪೋಸ್ ನೀಡಿದ್ದರು. ಮತ್ತೊಂದು ಫೋಟೋದಲ್ಲಿ ಮಗನನ್ನು ಹಿಡಿದುಕೊಂಡು ಪತಿ ಜೊತೆ ಅಮಲಾ ಲಿಪ್‌ಲಾಕ್ ಮಾಡಿದ್ದರು. ನಟಿ ಮಗನ ಫೋಟೋವನ್ನು ರಿವೀಲ್ ಮಾಡಿದ್ದಕ್ಕೆ ಫ್ಯಾನ್ಸ್ ಸಂಭ್ರಮಿಸಿದ್ದರು.

amala paul

ಅಂದಹಾಗೆ, ಕಳೆದ ವರ್ಷ ನವೆಂಬರ್‌ನಲ್ಲಿ ಉದ್ಯಮಿ ಜಗತ್ ದೇಸಾಯಿ (Jagath Desai) ಜೊತೆ ಅಮಲಾ ಮದುವೆಯಾದರು. ಈ ವರ್ಷ ಜೂನ್ 11ರಂದು ಗಂಡು ಮಗುವಿಗೆ ನಟಿ ಜನ್ಮ ನೀಡಿದರು.

Share This Article