ಕನ್ನಡದ ‘ಹೆಬ್ಬುಲಿ’ (Hebbuli) ಸಿನಿಮಾದ ನಟಿ ಅಮಲಾ ಪೌಲ್ (Amala Paul) ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮಗುವಿನ ಹೆಸರನ್ನು ಕೂಡ ರಿವೀಲ್ ಮೀಡಿದ್ದಾರೆ. ಇದನ್ನೂ ಓದಿ:‘ಏಕಂ’ ವೆಬ್ ಸಿರೀಸ್ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡ ಸಿಂಪಲ್ ಸ್ಟಾರ್
Advertisement
‘ಜೂನ್ 11ರಂದು ಜನಿಸಿದ ಪವಾಡ’ ಎಂದು ನಟಿ ಅಡಿಬರಹ ನೀಡಿದ್ದು, ಗಂಡು ಮಗುವಿಗೆ ‘ಇಲೈ’ ಎಂದು ಹೆಸರಿಟ್ಟಿದ್ದಾರೆ. ಇದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮಗುವನ್ನು ಹಿಡಿದು ಬರುವಾಗ ಮನೆಯಲ್ಲಿ ಅಮಲಾರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
Advertisement
View this post on Instagram
Advertisement
ಕಳೆದ ವರ್ಷ ನವೆಂಬರ್ನಲ್ಲಿ ಕೊಚ್ಚಿಯಲ್ಲಿ ಉದ್ಯಮಿ ಜಗತ್ ದೇಸಾಯಿ (Jagat Desai) ಜೊತೆ ಅಮಲಾ ಮದುವೆಯಾದರು. ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುನ್ನುಡಿ ಬರೆದರು.
Advertisement
ಕನ್ನಡದ ‘ಹೆಬ್ಬುಲಿ’ ಸಿನಿಮಾದಲ್ಲಿ ಸುದೀಪ್ಗೆ (Sudeep) ನಾಯಕಿಯಾಗಿ ಅಮಲಾ ನಟಿಸಿದ್ದರು. ಇತ್ತೀಚೆಗೆ ರಿಲೀಸ್ ಆದ ‘ಆಡುಜೀವಿತಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.