ಬೆಂಗಳೂರು: ಹೆಬ್ಬಾಳ-ಸರ್ಜಾಪುರ (Hebbala Sarjapura) ಮೆಟ್ರೋ (Namma Metro) ಅನುಮೋದನೆ ವಿಚಾರದಲ್ಲಿ ಕೇಂದ್ರದಿಂದ ಮತ್ತೆ ರಾಜ್ಯಕ್ಕೆ ಮುಖಭಂಗವಾಗಿದೆ. ಡಬಲ್ ಡೆಕ್ಕರ್ (Double Decker) ನಿಯಮ ಅಡ್ಡಿಯಾಗಿದ್ದು, ಈ ವಿನ್ಯಾಸದ ಮರುಪರಿಶೀಲನೆಗೆ ಕೇಂದ್ರ ಸರ್ಕಾರ (Central Government) ಸೂಚಿಸಿದೆ.
ಈ ಬಗ್ಗೆ ಸಂಸದ ಪಿಸಿ ಮೋಹನ್ (PC Mohan) ಮಾಹಿತಿ ನೀಡಿದ್ದು, ಕರ್ನಾಟಕದ ಡಬಲ್ ಡೆಕ್ಕರ್ ಯೋಜನೆಯಿಂದ ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್‌ಗೆ ಅಡ್ಡಿಯಾಗಿದೆ. ಯೋಜನೆಗೆ ನಿಗದಿಯಾಗಿದ್ದ 28,405 ಕೋಟಿ ರೂ. ಹಿಡಿದಿದೆ ಎಂದು ತಿಳಿಸಿದ್ದಾರೆ.
A double-decker may be justified at select junctions. But extending it across an entire corridor risks creating parallel infrastructure, encouraging private vehicle use, reducing Metro ridership, and weakening anticipated social benefits including lower congestion and pollution.
— P C Mohan (@PCMohanMP) February 11, 2026
ಎಲ್ಲಾ ಕಾರಿಡಾರ್‌ನಲ್ಲಿಯೂ ಡಬಲ್ ಡೆಕ್ಕರ್ ವಿಸ್ತರಣೆ ಸರಿಯಲ್ಲ ಎಂದು ಕೇಂದ್ರ ನಗರಾಭಿವೃದ್ಧಿ ಇಲಾಖೆ ಹೇಳಿದೆ. ಇಡೀ ಕಾರಿಡಾರ್‌ನಲ್ಲಿ ಡಬಲ್ ಡೆಕ್ಕರ್ ವಿಸ್ತರಿಸುವುದರಿಂದ ಖಾಸಗಿ ವಾಹನ ಬಳಕೆಯನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಟ್ರಾಫಿಕ್ ಜಾಮ್ ಹೆಚ್ಚಳವಾಗಿ ಮಾಲಿನ್ಯ ಹೆಚ್ಚಳವಾಗಲಿದೆ ಎಂಬುದಾಗಿ ತಿಳಿಸಿದೆ ಎಂದು ಮೋಹನ್ ಹೇಳಿದ್ದಾರೆ.
ನೂತನ ಮೆಟ್ರೋ ಮಾರ್ಗಗಳು ಹೋಗುವ ಮಾರ್ಗದಲ್ಲಿ ಸುಮಾರು 40 ಕಿ.ಮೀ ಡಬಲ್ ಡೆಕ್ಕರ್ ರಸ್ತೆ ನಿರ್ಮಿಸುವ ಗುರಿ ಹೊಂದಲಾಗಿದ್ದು, ಮುಂದಿನ 30-40 ವರ್ಷದ ಭವಿಷ್ಯವನ್ನು ಇಟ್ಟುಕೊಂಡು ಈ ಯೋಜನೆ ರೂಪಿಸಲು ಸಿದ್ಧತೆ ನಡೆದಿದೆ ಎಂದು ಈ ಜನವರಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಇದನ್ನೂ ಓದಿ: ಬೆಂಗಳೂರಿನಲ್ಲಿ 100 ಕಿಮೀ ಫ್ಲೈಓವರ್ ನಿರ್ಮಿಸುವ ಚಿಂತನೆಯಿದೆ: ಡಿ.ಕೆ ಶಿವಕುಮಾರ್
ಸಿಲಿಕಾನ್ ಸಿಟಿಯ ಟ್ರಾಫಿಕ್ ಕಡಿವಾಣಕ್ಕೆ ಡಬಲ್ ಡೆಕ್ಕರ್ ಫ್ಲೈಓವರ್
ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು 9,000 ಕೋಟಿ ರೂ. ವೆಚ್ಚದಲ್ಲಿ 40 ಕಿ.ಮೀ ಉದ್ದದ ಮೆಟ್ರೋ ಸಂಯೋಜಿತ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಿಸಲು ನಮ್ಮ ಸರ್ಕಾರ ಸಿದ್ಧತೆ ನಡೆಸಿದೆ. ಈ ಯೋಜನೆಯು ನಗರದ ಸುಗಮ ಸಂಚಾರಕ್ಕೆ ಹೊಸ ಆಯಾಮ ನೀಡಲಿದೆ. pic.twitter.com/AKhG3XxDOi
— DK Shivakumar (@DKShivakumar) January 8, 2026
ನೂತನ ಮೆಟ್ರೋ ಮಾರ್ಗಗಳಾದ ಜೆಪಿ ನಗರ 4ನೇ ಹಂತದಿಂದ ಹೆಬ್ಬಾಳ, ಹೊಸಹಳ್ಳಿಯಿಂದ ಕಡಬಗೆರೆವರೆಗೂ ಡಬ್ಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣ ಮಾಡಲಾಗುವುದು. ಅಲ್ಲದೆ, ಮೆಟ್ರೋ ಪೇಸ್-3 ಅಡಿಯಲ್ಲಿ ರಸ್ತೆ ಫ್ಲೈಓವರ್ ಮತ್ತು ಮೆಟ್ರೋ ಮಾರ್ಗ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಈ ಯೋಜನೆಯ ಅಂದಾಜು ವೆಚ್ಚ 9 ಸಾವಿರ ಕೋಟಿಯಾಗಲಿದೆ ಎಂದು ಡಿಕೆಶಿ ಮಾಹಿತಿ ಹಂಚಿಕೊಂಡಿದ್ದರು. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಲವ್ ಜಿಹಾದ್ ಆರೋಪ; ಯುವಕನ ಜೊತೆ ಪರಾರಿಯದ ಕೇರಳ ಯುವತಿ

