ಬೆಂಗಳೂರು: ಕೆಆರ್ ಪುರ ಕಡೆಯಿಂದ ಮೇಖ್ರಿ ವೃತ್ತದ ಕಡೆಗೆ ತೆರಳುವ ಹೆಬ್ಬಾಳ ಮೇಲ್ಸೇತುವೆಗೆ (Hebbal Flyover) ಹೆಚ್ಚುವರಿ ರ‍್ಯಾಂಪ್ ಅಳವಡಿಕೆ ಹಿನ್ನೆಲೆ ಇಂದಿನಿಂದ 5 ದಿನ ನಿತ್ಯ 3 ಗಂಟೆಗಳ ಕಾಲ ಹೆಬ್ಬಾಳ ಮೇಲ್ಸೇತುವೆ ಬಂದ್ ಆಗಲಿದೆ.
ಕಾಮಗಾರಿಯ (Road Work) ಭಾಗವಾಗಿ ರೈಲ್ವೆ ಹಳಿಗಳ ಮೇಲೆ 33.5 ಮೀಟರ್ ಉದ್ದದ 7 ಉಕ್ಕಿನ ಗಾರ್ಡರ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಈ ಹಿನ್ನೆಲೆ ಇಂದಿನಿಂದ ಮೇ 21ರವರೆಗೆ ಪ್ರತಿದಿನ 3 ಗಂಟೆಗಳ ಕಾಲ ಹೆಬ್ಬಾಳ ಮೇಲ್ಸೇತುವೆ ಬಂದ್ ಆಗಲಿದೆ. ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯವರೆಗೆ ಕಾಮಗಾರಿ ನಡೆಯಲಿದೆ. ಈ ಸಮಯದಲ್ಲಿ ಎಸ್ಟೀಮ್ ಮಾಲ್‌ನಿಂದ ಮೇಖ್ರಿ ವೃತ್ತದ ಕಡೆಗೆ ವಾಹನ ಸಂಚಾರ ಬಂದ್ ಆಗಲಿದೆ. ಏರ್ಪೋರ್ಟ್‌ನಿಂದ ಮೇಖ್ರಿ ವೃತ್ತದ ಕಡೆಗೆ ತೆರಳುವವರಿಗೆ ಪರ್ಯಾಯ ಮಾರ್ಗ ಸೂಚಿಸಲಾಗಿದೆ. ಇದನ್ನೂ ಓದಿ: ಮತ್ಸ್ಯ 6000 – ಆಳ ಸಮುದ್ರದ ರಹಸ್ಯಗಳನ್ನು ಭೇದಿಸಲು ಭಾರತ ಸಜ್ಜು
ಪರ್ಯಾಯ ಮಾರ್ಗ ಯಾವುದು?
– ಎಸ್ಟೀಮ್ ಮಾಲ್‌ನಲ್ಲಿರುವ ಸರ್ವಿಸ್ ರಸ್ತೆಯನ್ನು ಪ್ರವೇಶಿಸಿ.
– ಹೆಬ್ಬಾಳ ವೃತ್ತದಲ್ಲಿ ಹೊರ ವರ್ತುಲಕ್ಕೆ ಬಲ ತಿರುವು ಪಡೆದು ತುಮಕೂರು ಮಾರ್ಗವಾಗಿ ಚಲಿಸಿ.
– ಕುವೆಂಪು ವೃತ್ತದಲ್ಲಿ ಎಡ ತಿರುವು ಪಡೆದು ನ್ಯೂ ಬಿಇಎಲ್ ರಸ್ತೆ ಮೂಲಕ ಮೇಖ್ರಿ ವೃತ್ತವನ್ನು ತಲುಪಲು ಸೂಚನೆ ನೀಡಲಾಗಿದೆ.