ಬೆಂಗಳೂರು: ಮೂರು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಸಾವಿರಾರು ಜನರು ಓಡಾಡುವ ನಗರದ ಹೆಬ್ಬಾಳದ ಫ್ಲೈ ಓವರ್ ಪಿಲ್ಲರ್ ಕ್ರ್ಯಾಕ್ ಬಿಟ್ಟಿದೆ.
ಮುಂಬೈ ಫ್ಲೈ ಓವರ್ ಕುಸಿತ ಮಹಾದುರಂತ ಕಣ್ಣೆದುರೇ ಇರುವಾಗ ಹೆಬ್ಬಾಳದ ಫ್ಲೈ ಓವರ್ ಕೂಡ ಬಲಿಗಾಗಿ ಕಾದುಕೂತಿದೆ. ಬಿಡಿಎ ನಿರ್ಮಿಸಿರುವ ಫ್ಲೈ ಓವರ್ ಗೆ ಹತ್ತು ವರ್ಷವಾಗಿದ್ದು, ನಿಯಮದ ಪ್ರಕಾರ ಪ್ರತಿ ವರ್ಷ ಇದರ ಗುಣಮಟ್ಟವನ್ನು ಪರೀಕ್ಷೆ ಮಾಡಬೇಕು. ಆದರೆ ಹತ್ತು ವರ್ಷಗಳಾದರು ಇತ್ತ ಯಾವ ಅಧಿಕಾರಿಗಳು ಗಮನಹರಿಸಿಲ್ಲ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ.
Advertisement
Advertisement
ಫ್ಲೈ ಓವರ್ ನಿರ್ಮಿಸಿ ನಿರ್ವಹಣೆ ಮರೆತಿರುವ ಬಿಡಿಎ ಎಡವಟ್ಟಿನಿಂದ ಫ್ಲೈ ಓವರ್ ಪಿಲ್ಲರ್ ನಲ್ಲಿ ಬಿರುಕು ಕಾಣಿಸಿಕೊಂಡಿದೆ. ನಿರಂತರ ಮಳೆಯಿಂದಾಗಿ ಯಾವುದೇ ಕ್ಷಣದಲ್ಲಾದರೂ ಫ್ಲೈ ಓವರ್ ಕುಸಿಯುವ ಸಾಧ್ಯತೆ ಇದೆ. ನಿರ್ವಹಣೆ ಕೊರತೆಯಿಂದ ಹಾಗೂ ಭಾರದ ವಾಹನಗಳ ಓಡಾಟದಿಂದ ಅನಾಹುತ ಇದೆ ಎಂದು ಸಂಚಾರ ತಜ್ಞರು ಎಚ್ಚರಿಕೆ ನೀಡಿದ್ದಾರೆ.
Advertisement
ಸರ್ಕಾರ ಮುಂಜಾಗೃತವಾಗಿ ಈ ಹೆಬ್ಬಾಳ ಫ್ಲೈ ಓವರ್ ನತ್ತ ಗಮನ ಹರಿಸಬೇಕಾಗಿದೆ. ಈಗಾಗಲೇ ಭಯಾನಕ ಕ್ರ್ಯಾಕ್‍ಗಳಾಗಿದ್ದು, ಮಳೆಯಿಂದಾಗಿ ಪಿಲ್ಲರ್ ಕಂಬಿಗಳು ಸಂಪೂರ್ಣ ತುಕ್ಕು ಹಿಡಿಯುವ ಸಾಧ್ಯತೆ ಇದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv