ಮೈಸೂರು: ಭಾರೀ ಗಾಳಿಯಿಂದಾಗಿ ಶಾಲೆಯ ಹೊಸ ಕಟ್ಟಡದ ಮೇಲ್ಛಾವಣಿ ಹಾರಿ ಬಿದ್ದು, 20ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ರತ್ನಾಪುರಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ವಿಶ್ವ ಶಾಂತಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರು ಜನರು ಸೇರಿದ್ದರು. ಈ ವೇಳೆ ಗಾಳಿಯ ಬೀಸಿದ ಪರಿಣಾಮ, ಶಾಲೆಯ ಹೊಸ ಕಟ್ಟಡದ ಎಲ್ಲ ಕೊಠಡಿಗಳ ಶೀಟ್‍ಗಳು (ಮೇಲ್ಛಾವಣಿ) ಹಾರಿ ಬಿದ್ದಿದ್ದು, ಕೆಳಗೆ ಸಿಲುಕಿದ ಕೆಲವರಿಗೆ ಗಾಯವಾಗಿದೆ.
Advertisement
ಕಾರ್ಯಕ್ರಮದಲ್ಲಿ ಬಿಐಓ ರೇವಣ್ಣ, ಜಿಲ್ಲಾ ಪಂಚಾಯ್ತಿ ಸದಸ್ಯ ಸುರೇಂದ್ರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಅವಘಡದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಗಾಯಾಳುಗಳನ್ನು ಹುಣಸೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.