ಬೆಂಗಳೂರು: ತುಮಕೂರು ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ಇದು ಕಹಿ ಸುದ್ದಿ. ಪೀಣ್ಯ ಫ್ಲೈಓವರ್ (Peenya Flyover) ಮೇಲೆ ಮತ್ತೆ ಘನ ವಾಹನಗಳ (Heavy Vehicles) ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.
Advertisement
ಕಳೆದ ವರ್ಷ ಪೀಣ್ಯ ಫ್ಲೈಓವರ್‌ನ ಎರಡು ಪಿಲ್ಲರ್‌ನ ಕೇಬಲ್‍ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ ಎರಡ್ಮೂರು ತಿಂಗಳುಗಳ ಕಾಲ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಪಿಲ್ಲರ್‌ಗಳಿಗೆ ಕೇಬಲ್ ಅಳವಡಿಸಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (IISC) ಭಾರಿ ವಾಹನಗಳ ಓಡಾಡಿಸಿ ತಪಾಸಣೆ ಮಾಡಿ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿತ್ತು. ಆದರೆ ಈಗ ಮತ್ತೆ ಹೆವಿ ವೆಹಿಕಲ್ ಓಡಾಟಕ್ಕೆ ನಿರ್ಬಂಧಿಸಲಾಗಿದೆ. ಕಾರಣ ಫ್ಲೈಓವರ್‌ನ ಎಲ್ಲಾ ಪಿಲ್ಲರ್‌ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕ ಇದೆಯಂತೆ. ಹಾಗಾಗಿ ಕೇಬಲ್ ಕಿತ್ತು ಬರುವುದಕ್ಕೂ ಮುಂಚೆಯೇ ಹೊಸ ಕೇಬಲ್‍ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧಾರಿಸಿದೆ. ಇದನ್ನೂ ಓದಿ: ಕೋರಮಂಗಲ ಕಿಡ್ನಾಪ್ ಸ್ಟೋರಿಗೆ ಟ್ವಿಸ್ಟ್- ಹಣಕ್ಕಾಗಿ ಅಪಹರಿಸಿ ಹುಡುಗಿಗಾಗಿ ಡಿಮ್ಯಾಂಡ್
Advertisement
Advertisement
ಇದಕ್ಕಾಗಿ ಟೆಂಡರ್ ಕೂಡ ನೀಡಿದ್ದು ಫೆಬ್ರವರಿ ತಿಂಗಳಲ್ಲಿ ಕೆಲಸ ಶುರುವಾಗುವ ಸಾಧ್ಯತೆ ಇದೆ. ಹಾಗಾಗಿ ಹೆವಿ ವೆಹಿಕಲ್ ಓಡಾಟ ನಡೆಸಿದರೆ ಪಿಲ್ಲರ್ ಮತ್ತು ಫ್ಲೈಓವರ್ ಕೇಬಲ್‍ಗಳು ಕಿತ್ತು ಬರುವ ಸಾಧ್ಯತೆ ಇರೋದ್ರಿಂದ ಮುಂದಿನ ನಾಲ್ಕು ತಿಂಗಳವರೆಗೂ ಹೆವಿ ವೆಹಿಕಲ್‍ಗಳಿಗೆ ನಿರ್ಬಂಧಿಸಲಾಗಿದೆ. ಫ್ಲೈಓವರ್‌ನ ಪ್ರವೇಶ ದ್ವಾರದಲ್ಲೇ ಟ್ರಾಫಿಕ್ ಪೊಲೀಸ್ರು ಮತ್ತು ಹೋಂಗಾರ್ಡ್‍ಗಳು ಬ್ಯಾರಿಕೇಡ್ ಹಾಕಿ ಹೆವಿ ವೆಹಿಕಲ್ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ. ಇದನ್ನೂ ಓದಿ: ಪಿಲ್ಲರ್ ದುರಂತ ಬಳಿಕ ಮತ್ತೊಂದು ಎಡವಟ್ಟು – ಬ್ರಿಗೇಡ್ ರಸ್ತೆಯಲ್ಲಿ 30 ಅಡಿ ಆಳಕ್ಕೆ ಕುಸಿದ ರಸ್ತೆ
Advertisement
ಪೀಣ್ಯ ಫ್ಲೈಓವರ್ 120 ಪಿಲ್ಲರ್‌ಗಳನ್ನು ಒಳಗೊಂಡಿದೆ. 240 ಕೇಬಲ್‍ಗಳನ್ನು ಅಳವಡಿಸಬೇಕಾಗಿದೆಯಂತೆ. ಪ್ರತಿ ಪಿಲ್ಲರ್‌ಗೂ ಎರಡೆರಡು ಕೇಬಲ್‍ಗಳನ್ನು ಅಳವಡಿಸಬೇಕಿದ್ದು ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ. ಕೇಬಲ್ ಅಳವಡಿಸಿದ ಬಳಿಕ ಐಐಎಸ್‍ಸಿ ಅವರು ಫ್ಲೈಓವರ್ ಮೇಲೆ ಪ್ರಾಯೋಗಿಕವಾಗಿ ಹೆವಿ ವೆಹಿಕಲ್‍ಗಳನ್ನು ಓಡಾಡಿಸಿ ತಪಾಸಣೆ ಮಾಡಲಿದ್ದಾರೆ. ಆ ತಪಾಸಣೆಯಲ್ಲಿ ಪಾಸ್ ಆದರೆ ಹೆವಿ ವೆಹಿಕಲ್‍ಗೆ ಅವಕಾಶ ಕೊಡಬಹುದು.
23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಬೆಂಗಳೂರು ಮತ್ತು ರಾಜ್ಯದ ಜಿಲ್ಲೆಗಳಿಗೆ ಒಂದು ರೀತಿ ಆರ್ಥಿಕ ಚೇತರಿಕೆಯ ಕೊಂಡಿ ಆಗಿದ್ದು, ಇದರ ದುರಸ್ಥಿ ಕಾರ್ಯ ಆದಷ್ಟು ಬೇಗ ಆಗಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k