ಬೆಂಗಳೂರು: ಇಂದು ಸಂಜೆ 6 ಗಂಟೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿ ಎಲಿವೇಟೇಡ್ ಫ್ಲೈ ಓವರ್ ಮೇಲೆ ಬಸ್ ಮತ್ತು ಬೃಹತ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಸಿಟಿಯಿಂದ ಸಿಲ್ಕ್ ಬೋರ್ಡ್‍ಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಇದಾಗಿದ್ದು, ಈ ಸೇತುವೆ ನಿರ್ಮಾಣವಾಗಿ 8 ವರ್ಷಗಳಾಗಿದ್ದರಿಂದ ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ತಡೆ ಏರಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮದಂತೆ ನಿರ್ವಹಣೆ ನಡೆಯಲಿದ್ದು, ನಿರ್ವಹಣೆಗಾಗಿ ಬೃಹತ್ ವಾಹನಗಳಿಗೆ ಅವಕಾಶವಿಲ್ಲ.
ಲಘು ವಾಹನಗಳು, ಕಾರು, ದ್ವಿಚಕ್ರ ವಾಹನಗಳು ಸಂಚಾರ ಎಂದಿನಂತೆ ಇರಲಿದ್ದು ಫ್ಲೈ ಓವರ್ ಮೇಲೆ ಯಾವುದೇ ಅಪಾಯವಿಲ್ಲ. ಕೇವಲ ನಿರ್ವಹಣೆಗಾಗಿಯೇ ಬೃಹತ್ ವಾಹನಗಳಿಗೆ ಪ್ರವೇಶವಿಲ್ಲವೆಂದು ಬೆಂಗಳೂರು ಎಲಿವೇಟೆಡ್ ಟೋಲ್ ವೇ ಲಿಮಿಟೆಡ್(ಬಿಇಟಿಎಲ್) ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಮೇಲ್ಸೆತುವೆ ಮೇಲಿನ ರಸ್ತೆ ಮತ್ತು ಜಾಯಿಂಟ್‍ಗಳ ನಿರ್ವಹಣೆ ಹಾಗೂ ಪಾಟ್ ಹೋಲ್ಸ್ ನಿರ್ವಹಣೆಯ ನಡೆಯಲಿದೆಯೆಂದು ಪ್ರಕಟಣೆಯಲ್ಲಿ ಬಿಇಟಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com