ಬೆಂಗಳೂರು: ಸೋಮವಾರ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಜನ ತಮ್ಮೂರುಗಳತ್ತ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣಿಕರಿಂದ ಮೆಜೆಸ್ಟಿಕ್ ನ KSRTC ಬಸ್ ನಿಲ್ದಾಣ ತುಂಬಿ ತುಳುಕ್ತಿದ್ದು, ಹೆಚ್ಚುವರಿಯಾಗಿ 12,00 ಬಸ್ ಗಳನ್ನ ಬಿಡಲಾಗಿದೆ. ಬಿಎಂಟಿಸಿ ಬಸ್ ಗಳು ಕೂಡ ಜಿಲ್ಲೆಗಳಿಗೆ ಸಂಚಾರ ಮಾಡ್ತಿವೆ.
Advertisement
ಹಬ್ಬದ ಸಲುವಾಗಿ ಊರಿಗೆ ಹೋಗಲಿರುವ ಹಲವಾರು ಮಂದಿ ಇಂದೇ ಹೊರಟಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದ ಸುತ್ತಮುತ್ತ ಜನರಿಂದ ತುಂಬಿ ತುಳುಕಿದೆ. ಮಾತ್ರವಲ್ಲದೆ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರೂ ಪರದಾಡುವಂತಾಗಿದೆ. ಕಾರ್ಪೋರೇಷನ್, ಮೆಜೆಸ್ಟಿಕ್,ಮೈಸೂರು ಬ್ಯಾಂಕ್ ಸರ್ಕಲ್ , ನವರಂಗ್ ಸೇರಿದಂತೆ ವಿವಿಧ ರಸ್ತೆಗಳು ಸಂಪೂರ್ಣ ಜಾಮ್ ಆಗಿವೆ.
Advertisement
Advertisement
ವಾರಾಂತ್ಯದ ರಜೆ ಜೊತೆಗೆ ಹಬ್ಬದ ರಜೆಯೂ ಸೇರಿ ಮೂರ್ನಾಲ್ಕು ದಿನಗಳ ಸರಣಿ ರಜೆ ಸಿಗುವುದರಿಂದ ಹಲವರು ಇಂದೇ ಊರಿಗೆ ಹೊರಟಿದ್ದಾರೆ. ಹೀಗಾಗಿ ಮೆಜೆಸ್ಟಿಕ್ ಹಾಗೂ ಸುತ್ತಮುತ್ತಲ ಸುತ್ತಮುತ್ತಲಿನ ರಸ್ತೆಗಳು ಬಹುತೇಕ ಜಾಮ್ ಆಗಿವೆ. ಜನಸಂಚಾರ ಜಾಸ್ತಿ ಇರುವುದರಿಂದ ಊರಿಗೆ ಹೊರಟ ಬಸ್ ಹಾಗೂ ಇತರ ವಾಹನಗಳ ಸಂಖ್ಯೆಯೂ ಹೆಚ್ಚಿರುವುದರಿಂದ ಟೌನ್ಹಾಲ್ನಿಂದ ಮೆಜೆಸ್ಟಿಕ್ವರೆಗೂ ವಾಹನಗಳು ಸಾಲುಗಟ್ಟಿ ನಿಂತ ದೃಶ್ಯಗಳು ಕಂಡುಬಂದಿತ್ತು.
Advertisement
ಟ್ರಾಫಿಕ್ ಜಾಮ್ ಕೂಡ ಜಾಸ್ತಿ ಇದ್ದಿದ್ದರಿಂದ 2-3 ಕಿ.ಮೀ. ದೂರ ವಾಹನದಟ್ಟಣೆ ಉಂಟಾಗಿ, ನಿಧಾನಗತಿಯ ಚಲನೆ ಕಂಡುಬಂದಿದೆ. ಪರಿಣಾಮವಾಗಿ ಕೆಲವರು ನಡೆದೇ ಬಸ್ ನಿಲ್ದಾಣ ತಲುಪುವಂತಾಗಿದೆ.
Web Stories