ಶಿಮ್ಲಾ: ಮುಂದಿನ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದ್ದು, ಭಾರತೀಯ ಹವಾಮಾನ ಇಲಾಖೆ ಜನಪ್ರಿಯ ಪ್ರವಾಸಿ ತಾಣಗಳಾದ ಚಂಬಾ, ಸ್ಪಿತಿ, ಕುಲು, ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಜಾರಿ ಮಾಡಿದೆ.
ಕಳೆದ ವರ್ಷಕ್ಕೆ ಹೊಲೀಸಿ ನೋಡಿದರೆ ಈ ವರ್ಷ ರಾಜ್ಯದಲ್ಲಿ ಅತೀಯಾದ ಹಿಮಪಾತವಾಗಿದೆ. ಇನ್ನೂ ಮುಂಬರುವ 48 ಗಂಟೆಗಳಲ್ಲಿ ಹಿಮಾಚಲ ಪ್ರದೇಶದ ಎತ್ತರದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುವ ಸಾಧ್ಯತೆಯಿದೆ ಎಂದು ನಗರದ ಐಎಮ್‍ಡಿ ಪ್ರಾದೇಶಿಕ ಕಚೇರಿಯ ಮುಖ್ಯಸ್ಥ ಸುರೇಂದರ್ ಪಾಲ್ ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ದುಬಾರಿ ಬೆಲೆಗೆ ಮನೆಯನ್ನು ಮಾರಾಟ ಮಾಡಿದ ಬಿಗ್ ಬಿ
ಹವಾಮಾನ ಇಲಾಖೆಯು ಸೋಮವಾರ ತನ್ನ ಮುನ್ಸೂಚನೆಯಲ್ಲಿ ಭಾರೀ ಹಿಮಪಾತದಿಂದಾಗಿ ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಶೀತದ ಅಲೆಗಳು ಬರುವ ನಿರೀಕ್ಷೆಯಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಫೆಬ್ರವರಿಯಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆಯಿರುತ್ತದೆ. ಆದರೆ ಪಂಜಾಬ್ ಮತ್ತು ಹರಿಯಾಣದಲ್ಲಿ ಸಾಮಾನ್ಯ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ. ಇದನ್ನೂ ಓದಿ: ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ
ಭಾರತದ ಪರ್ಯಾಯ ದ್ವೀಪದ ಪೂರ್ವ ಮತ್ತು ನೈಋತ್ಯ ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ತಿಳಿಸಿದೆ.
ಇದರ ಮಧ್ಯೆ ದೆಹಲಿಯಲ್ಲಿ ಬುಧವಾರ ಬೆಳಗ್ಗೆ ಮಂಜು ಕಾಣಿಸಿಕೊಂಡಿದ್ದು, ಕನಿಷ್ಠ ತಾಪಮಾನವು 11.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ರಾಜಧಾನಿಯ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವರ್ಗದಲ್ಲಿದೆ. ಏಕೆಂದರೆ ಬುಧವಾರ ಬೆಳಗ್ಗೆ 7.05 ಕ್ಕೆ ವಾಯು ಗುಣಮಟ್ಟ ಸೂಚ್ಯಂಕ 341 ಆಗಿತ್ತು. ಆದರೆ ದೆಹಲಿಯ ನೆರೆಯ ಪ್ರದೇಶಗಳಲ್ಲಿ ಫರಿದಾಬಾದ್ (283), ಗಾಜಿಯಾಬಾದ್ (356), ಗ್ರೇಟರ್ ನೋಯ್ಡಾ (216), ಗುರುಗ್ರಾಮ್ (274) ಮತ್ತು ನೋಯ್ಡಾ (327) ರಷ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳು ತೋರಿಸಿವೆ.