ಚಿತ್ರದುರ್ಗ: ಕೊರೊನ ವೈರಸ್‍ನಿಂದ ರಾಜ್ಯದ ಎಲ್ಲೆಡೆ ಲಾಕ್‍ಡೌನ್ ಜಾರಿ ಇದ್ದು, ಈ ಲಾಕ್‍ಡೌನ್‍ನಿಂದ ಕಳೆದ ಒಂದು ತಿಂಗಳಿಂದ ಮನೆಯಲ್ಲೇ ಉಳಿದಿದ್ದ ಇಬ್ಬರು ರೈತರ ಜೀವವನ್ನು ವರುಣ ಬಲಿ ಪಡೆದಿದ್ದಾನೆ.
ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿನಾದ್ಯಂತ ಇಂದು ಭಾರೀ ಗಾಳಿ ಸಹಿತ ಮಳೆಯಾಗಿದೆ. ಗುಡುಗು, ಸಿಡಿಲು ಸಹಿತ ಅಬ್ಬರಿಸಿದ ವರುಣನ ಆರ್ಭಟಕ್ಕೆ ಶ್ರೀರಾಂಪುರ ಹೋಬಳಿಯ ಆಲ್ಗಟ್ಟ ಗ್ರಾಮದ ರೇಣುಖಾರಾಧ್ಯ (35) ಎಂಬ ರೈತನ ಮೇಲೆ ತೆಂಗಿನ ಮರವೊಂದು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement
Advertisement
ಇತ್ತ ಹೊಸದುರ್ಗ ತಾಲೂಕಿನ ಕಸಬಾ ಹೋಬಳಿಯ ಮಧುರೆ ಗ್ರಾಮದ ರಿ. ಸರ್ವೆ ನಂಬರು 78 ರಲ್ಲಿ ಬರುವ ಜಮೀನಿನಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ನೆಲ್ಲಕ್ಕುರುಳಿದೆ. ಈ ವೇಳೆ ಮರದ ಕೆಳಗೆ ಕುಳಿತಿದ್ದ ಗ್ರಾಮದ ನಿವಾಸಿ ಗೀತಮ್ಮ(45) ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಗಳಿಗೆ ಶಾಸಕ ಗೂಳಿಹಟ್ಟಿ ಶೇಖರ್ ಹಾಗೂ ತಹಶೀಲ್ದಾರ್ ತಿಪ್ಪೇಸ್ವಾಮಿ ಹಾಗೂ ಪೊಲೀಸರು ಭೇಟಿ ನೀಡಿದ್ದು, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
Advertisement
ಉಳಿದಂತೆ ಮಾಡದಕೆರೆ ಹೋಬಳಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಗಾಳಿ ಸಹಿತ ಮಳೆ ಸುರಿದ ಹಿನ್ನಲೆಯಲ್ಲಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ನೀರು ಕುಡಿಯಲು ಹೋದ ಎರಡು ಎಮ್ಮೆಗಳು ಸಾವನ್ನಪಿದ್ದಾವೆ.