ಬೆಂಗಳೂರು: ರಾಜ್ಯದ ಕೆಲ ಜಿಲ್ಲೆಗಳಲ್ಲಿ ವರುಣನ ಆರ್ಭಟಕ್ಕೆ ಮುಂದುವರಿದಿದೆ. ಅರಬ್ಬೀಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ಜುಲೈ 5ರವರೆಗೆ ಅಂದರೆ ಮುಂದಿನ 3 ದಿನ ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Advertisement
ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಪಶ್ಚಿಮ ಘಟ್ಟದಲ್ಲಿಯೂ ಭಾರೀ ಮಳೆಯ ಮುನ್ನೆಚ್ಚರಿಕೆ ಕೊಡಲಾಗಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಗುರುವಾರದ ಮಳೆಗೆ ಜನ ಚೇತರಿಸಿಕೊಂಡಿಲ್ಲ. ಮತ್ತೊಂದು ಭಾರೀ ಮಳೆ ಆತಂಕ ಸೃಷ್ಟಿಸಿದೆ. ಗದ್ದೆಗಳು ಜಲಾವೃತವಾಗಿದ್ದು, ಭತ್ತ, ತೆಂಗು, ಅಡಿಕೆ ಬೆಳೆಗಳಿಗೆ ಸಂಪೂರ್ಣ ನಾಶವಾಗಿದೆ.
Advertisement
Advertisement
ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಗ್ರಾಮದಲ್ಲಿ ಪದೇ ಪದೇ ಭೂಕಂಪದಿಂದ ಜನರು ಆತಂಕದಲ್ಲೇ ದಿನದೂಡುತ್ತಿದ್ದಾರೆ. 4-5 ದಿನಗಳಿಂದ ಮಳೆ ಚುರುಕುಗೊಂಡಿದ್ದು 2018ರ ಪ್ರವಾಹ ಭೀತಿ ಮರುಕಳಿಸುವ ಆತಂಕ ಮನೆ ಮಾಡಿದೆ. ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಈ ವರ್ಷ ಬೇಗ ಭರ್ತಿಯಾಗಿದೆ. ಒಟ್ಟು ಜಲಾಶಯ ಒಟ್ಟು ಮಟ್ಟ 8.50 ಟಿಎಂಸಿ ಪೈಕಿ ಇದೀಗ 8.20 ಟಿಎಂಸಿಯಷ್ಟು ನೀರಿದೆ. ಯಾವುದೇ ಸಮಯದಲ್ಲಿ ಡ್ಯಾಂನಿಂದ ನೀರು ಹೊರಬಿಡಬಹುದಾಗಿದೆ. ಇದನ್ನೂ ಓದಿ: ಚಿಕನ್ ಕಬಾಬ್, ಲೆಗ್ ಪೀಸ್‌ನಲ್ಲಿ ಹುಳ! – ಮಹಿಳೆ ಆಸ್ಪತ್ರೆಗೆ, ಹೋಟೆಲ್‌ಗೆ ಬೀಗ
Advertisement
ರಾಯಚೂರಿನಲ್ಲಿ ಸುರಿದ ಮಳೆಯಿಂದಾಗಿ ನಗರದ ಸಿಯತಲಾಬ್ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲೂ 3 ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಮಧ್ಯೆ, ದೇಶದಲ್ಲಿ ಕಳೆದ 2 ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಜೂನ್ ತಿಂಗಳಲ್ಲಿ ಶೇ.8ರಷ್ಟು ಮುಂಗಾರು ಕೊರತೆಯಾಗಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ದೆಹಲಿಯಲ್ಲೀ ಜೂನ್‍ನಲ್ಲಿ ಕಡಿಮೆ ಮಳೆ ಆಗಿದೆ.