ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Assembly Election 2023)ಗೆ ಕೌಂಟ್ ಡೌನ್ ಆರಂಭವಾಗಿದೆ. ಆದರೆ ಈ ಬಾರಿಯ ಎಲೆಕ್ಷನ್‍ಗೆ ವರುಣದೇವ ಅಡ್ಡಿಯಾಗೋ ಸಾಧ್ಯತೆಯಿದೆ. ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಮಳೆ (Rain) ಮುನ್ಸೂಚನೆ ನೀಡಲಾಗಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಸುಳಿಗಾಳಿ ಉಂಟಾದ ಪರಿಣಾಮವಾಗಿ ರಾಜ್ಯದಲ್ಲಿ ಮಳೆಯಾಗುತ್ತಿದೆ. ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದ್ದು, ತಾಪಮಾನದಲ್ಲಿ ಭಾರೀ ಇಳಿಕೆಯಾಗಿದೆ. ಬೆಂಗಳೂರು (Bengaluru) ನಗರದ ವಿವಿಧ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ನಗರದ ಪಿಇಎಸ್ ಕಾಲೇಜ್ ಬಳಿಯ ವೀರಭದ್ರನಗರದ ಸ್ಲಮ್‍ನಲ್ಲಿ ಮಳೆಗೆ 5 ಮನೆಗಳು ಕುಸಿದ ಬಿದ್ದಿವೆ. ಜೊತೆಗೆ ಕಾಂಪೌಂಡ್ ಗೋಡೆ ಸಹ ಕುಸಿದಿದೆ. ಪಕ್ಕದ ಅಪಾರ್ಟ್‌ಮೆಂಟ್ ನಿಲ್ಲಿಸಿದ್ದ ಕಾರಗಳು ಸಂಪೂರ್ಣ ಜಖಂ ಆಗಿವೆ. ಅದೃಷ್ಟವಶಾತ್ ಸಾವು-ನೋವು ಉಂಟಾಗಿಲ್ಲ. ಇದನ್ನೂ ಓದಿ: ಚುನಾವಣಾ ದಿನ ನಂದಿಗಿರಿಧಾಮ ಸಂಪೂರ್ಣ ಬಂದ್
Advertisement
Advertisement
ರಾಜ್ಯದಲ್ಲಿ ಮತ್ತೆರೆಡು ದಿನ ಮಳೆ ಮುನ್ಸೂಚನೆ: ರಾಜ್ಯದಲ್ಲಿ ಮುಂದಿನ 3-4 ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮಟ್ಟದಲ್ಲಿ ಸುಳಿಗಾಳಿ ಉಂಟಾಗಿದ್ದು, ಅದರ ಪ್ರಭಾವದಿಂದಾಗಿ ಸಮುದ್ರ ಮಟ್ಟದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ವಾಯುಭಾರ ಕುಸಿತ ಆಗ್ನೇಯದಿಂದ ಉತ್ತರ ದಿಕ್ಕಿನಲ್ಲಿ ತಲುಪಿ, ಮಧ್ಯಬಂಗಾಳ ಕೊಲ್ಲಿಯಲ್ಲಿ 10ರಂದು ಚಂಡಮಾರುತವಾಗುವ ಸಾಧ್ಯತೆಗಳಿವೆ. ಇದರ ಪ್ರಭಾವದಿಂದಾಗಿ ರಾಜ್ಯದಲ್ಲಿ ಮುಂದಿನ 4 ದಿನಗಳ ಕಾಲ ಮಳೆಯಾಗಲಿದೆ. ಇದರ ಪ್ರಭಾವ ದಕ್ಷಿಣ ಒಳನಾಡಿನಲ್ಲಿ ಹೆಚ್ಚಾಗಿರುತ್ತದೆ. ಮೇ 11ರಂದು ಕೆಲವು ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ (Yellow Alert) ನೀಡಲಾಗಿದೆ. ಈ ಮಳೆ ಚುನಾವಣೆಗೆ ಅಡ್ಡಿಯಾಗೋ ನಿರೀಕ್ಷೆಯಿದ್ದು, ಮತದಾನದ ಪ್ರಮಾಣ ಕಡಿಮೆಯಾಗೋ ಸಾಧ್ಯತೆಯಿದೆ.
Advertisement
Advertisement
ಬೀದರ್ (Bidar) ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆಯಾಗಿದೆ. ಹುಮ್ನಾಬಾದ್, ಭಾಲ್ಕಿ ಸೇರಿ ಹಲವೆಡೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಜೋರು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಇನ್ನುಳಿದಂತೆ ಧಾರವಾಡ, ಹಾಸನ, ಕೊಡಗು, ಯಾದಗಿರಿ ಸೇರಿ ಹಲವೆಡೆ ಮಳೆಯಾಗಿದೆ.