– ಎಡೆಬಿಡದ ಮಳೆಗೆ ಆರ್‌ಸಿಬಿ, ಕೆಕೆಆರ್ ಪಂದ್ಯ ರದ್ದು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ(Bengaluru) ವರುಣ ಅಬ್ಬರಿಸಿದ್ದಾನೆ. ಬೆಳಗ್ಗೆಯಿಂದ ಮೋಡಕವಿದ ವಾತಾವರಣ ವಿದ್ದು, ಸಂಜೆಯಾಗ್ತಿದ್ದಂತೆ ಮಳೆಯ ಆಗಮನವಾಗಿದೆ. ದಿಢೀರ್ ಸುರಿದ ಮಳೆಗೆ ಜನರು ಹೈರಾಣರಾಗಿದ್ದಾರೆ. ನಾಗವಾರದಲ್ಲಿ ಮನೆಗೆ ನೀರು ನುಗ್ಗಿ ಜನರು ಪರದಾಡಿದರು. ಇನ್ನೂ ಎರಡು ದಿನ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ವಿಧಾನಸೌಧ, ಎಂಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ, ಕಾರ್ಪೊರೇಷನ್ ಸರ್ಕಲ್, ಹಲಸೂರು, ರೇಸ್ ಕೋರ್ಸ್, ಮೆಜೆಸ್ಟಿಕ್, ಶೇಷಾದ್ರಿಪುರಂ, ಮಲ್ಲೇಶ್ವರಂ ಸುತ್ತಮುತ್ತ ಮಳೆಯಾಗಿದೆ. ಆರ್‌ಸಿಬಿ ಹಾಗೂ ಕೆಕೆಆರ್ ಐಪಿಎಲ್ ಪಂದ್ಯಕ್ಕೂ ಮಳೆ ಅಡ್ಡಿಯಾಗಿದೆ. ಇದನ್ನೂ ಓದಿ: ಮಳೆಯಿಂದ ಪಂದ್ಯ ರದ್ದು, ಕೋಲ್ಕತ್ತಾ ಔಟ್ – ಪ್ಲೇ ಆಫ್ ಸನಿಹದಲ್ಲಿ ಆರ್‌ಸಿಬಿ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ(Chinnaswamy Stadium) ಸುತ್ತಮುತ್ತಲು ಎಡೆಬಿಡದೇ ಸುರಿದ ಮಳೆಯಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಒಳಗೆ ಜನ ತುಂಬಿ ತುಳುಕಿದ ಕಾರಣ ಮೆಟ್ರೋ ರೈಲುಗಳು ನಿಲ್ಲಿಸದೇ ತೆರಳಿವೆ. ಕಬ್ಬನ್ ಪಾರ್ಕ್‌ನಲ್ಲಿ ಮೆಟ್ರೋ ನಿಲ್ಲಿಸದ ಕಾರಣ ಪ್ರಯಾಣಿಕರು ವಿಧಾನಸೌಧ ಇಲ್ಲವಾದಲ್ಲಿ ಎಂಜಿ ರೋಡ್‌ನಲ್ಲಿ ಇಳಿಯಬೇಕಾದ ಪರಿಸ್ಥಿತಿ ಎದುರಾಯಿತು. ಇದನ್ನೂ ಓದಿ: ಬಿಳಿ ಪಾರಿವಾಳಗಳಿಂದಲೂ ಕೊಹ್ಲಿಗೆ ಗೌರವ – ಇದು ವೈಟ್ ಆರ್ಮಿ ಎಂದ ಕೊಹ್ಲಿ ಫ್ಯಾನ್ಸ್
ಇನ್ನು ಭಾರತಿ ನಗರದಲ್ಲಿ ಕೆಲ ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಲ್ಲದೇ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಜನಸಾಮಾನ್ಯರು ತೊಂದರೆ ಅನುಭವಿಸಿದರು. ಮಳೆಯ ಅವಾಂತರಕ್ಕೆ ಜಯನಗರ ಬಳಿಯ ಈಸ್ಟ್ ಎಂಡ್ ಸರ್ಕಲ್‌ನಲ್ಲಿ ಬೃಹತ್ ಮರವೊಂದು ಧರೆಗುರುಳಿದೆ. ಈ ಮರವು ಆಟೋ ಮೇಲೆ ಬಿದ್ದು, ಆಟೋ ಜಖಂಗೊಂಡಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದನ್ನೂ ಓದಿ: ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ – ಕಮಲ್ ಹಾಸನ್ ʻಥಗ್ ಲೈಫ್ʼ!
ಈ ಮಳೆಗೂ ಸಾಯಿ ಲೇಔಟ್ ಸಂಪೂರ್ಣ ಜಲಾವೃತವಾಗಿದೆ. ಇಂದು ಸುರಿದ ಮಳೆಯಿಂದ ಸಾಯಿ ಲೇಔಟ್ ಮನೆಗಳಿಗೆ ನೀರು ನುಗ್ಗಿದ್ದು, ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಜನರು ಗೋಳಾಡಿದರು.