ಮಂಗಳೂರಿನಲ್ಲಿ ಭಾರೀ ಮಳೆ – ಪಂಪ್‌ವೆಲ್ ಸರ್ಕಲ್ ಮತ್ತೆ ಮುಳುಗಡೆ

Public TV
1 Min Read
Mangaluru Rain

– ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಂತ ವಾಹನಗಳು

ಮಂಗಳೂರು: ನಗರದಲ್ಲಿ ಕಳೆದ ಕೆಲ ಗಂಟೆಯಿಂದ ಭಾರೀ ಮಳೆಯಾಗುತ್ತಿದ್ದು, ಪಂಪ್‌ವೆಲ್ ವೃತ್ತವು ಮತ್ತೆ ಮುಳುಗಡೆಯಾಗಿದೆ. ಭಾರೀ ಮಳೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

Mangaluru Pumpwell Circle

ರಸ್ತೆಯಲ್ಲೇ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿರುವ ಹಿನ್ನೆಲೆ ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ. ಇದೀಗ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮಳೆ ನೀರಿನಲ್ಲೇ ಸಂಚರಿಸಲು ಯತ್ನಿಸಿದ ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತಿದ್ದು, ನಂತರ ಸ್ಥಳೀಯರು ಬಸ್‌ನ್ನು ತಳ್ಳಿ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ. ಇದನ್ನೂ ಓದಿ: Exclusive | ವಾಲ್ಮೀಕಿ ಹಗರಣ: ಬಳ್ಳಾರಿ ಚುನಾವಣೆಗೆ 27 ಕೋಟಿ ಬಳಕೆಯಾಗಿದ್ದು ಹೇಗೆ? – 87 ಕೋಟಿ ಎಲ್ಲೆಲ್ಲಿ ಹಂಚಿಕೆಯಾಯ್ತು?

ಇನ್ನು ಅತ್ತಾವರ ಕೆಎಂಸಿ ಬ್ಯಾಕ್ ಗೇಟ್ ಹಾಗೂ ಬಿಜೈ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಸೃಷ್ಠಿಯಾಗಿದೆ.

Share This Article