ಬೆಂಗಳೂರು: ಬಂಗಾಳ ಉಪಮಹಾಸಾಗರದಲ್ಲಿ (Bay of Bengal) ನೈರುತ್ಯ ಮಳೆಯ ಮಾರುತ ಚುರುಕು ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 18ರವರೆಗೆ ಭಾರೀ ಮಳೆಯಾಗುವ (Rain) ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.
ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಎಲ್ಲಾ ಜಿಲ್ಲೆಗೂ ಇಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: 1 ರೂಪಾಯಿ ಬಡ್ಡಿಗೆ ಲೋನ್ ಕೊಡಿಸ್ತೀವಿ ಅಂತ ಬರ್ತಾರೆ ಹುಷಾರ್ – ಬೆಂಗಳೂರಲ್ಲೊಂದು ಖತರ್ನಾಕ್ ಲೇಡಿ ಗ್ಯಾಂಗ್
ಸಂಜೆ ವೇಳೆಗೆ ಬೆಂಗಳೂರಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆ ಬೆಂಗಳೂರಿಗೂ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಇರಲಿದ್ದು, ಈ ಅವಧಿಯಲ್ಲಿ ಸಿಡಿಲು ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ನೂರಾರು ಶವಗಳ ಹೂತಿಟ್ಟ ಕೇಸ್ – ಕೋರ್ಟ್‌ನಲ್ಲಿ ಹೊಸ ಕಥೆ ಬಿಚ್ಚಿಟ್ಟ `ಬುರುಡೆ’ ಚಿನ್ನಯ್ಯ