ಬೆಂಗಳೂರು: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮೇ ತಿಂಗಳಿನಲ್ಲೇ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 12 ಜಿಲ್ಲೆಯಲ್ಲಿ ವರುಣನ ಅಬ್ಬರ ಜೋರಾಗಿದೆ.
Advertisement
ಮುಂದಿನ 24 ಗಂಟೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಕಚ್ಚಾ ಬಾದಾಮ್ ಗಾಯಕನಿಗೆ ರೈಲ್ವೆಯಲ್ಲಿ ಮ್ಯಾನೇಜರ್ ಹುದ್ದೆ – ಅಸಲಿ ಸುದ್ದಿ ಏನು?
Advertisement
Advertisement
ಗುರುವಾರ ಬೆಳಗ್ಗೆ 8.30ರಿಂದ ಶುಕ್ರವಾರ ಬೆಳಗ್ಗೆ 8.30ರವರೆಗೂ ಯಾವ, ಯಾವ ಜಿಲ್ಲೆಗಳಲ್ಲಿ ಎಷ್ಟೆಷ್ಟು ಮಳೆಯಾಗಿದೆ ಎಂಬುವುದರ ಮಾಹಿತಿ ಈ ಕೆಳಗಿನಂತಿದೆ. ಇದನ್ನೂ ಓದಿ: ಹೊಸ ಕಾರು ಖರೀದಿಸಿದ ನವರಸ ನಾಯಕ ಜಗ್ಗೇಶ್
Advertisement
ಯಾವ ಜಿಲ್ಲೆಯಲ್ಲಿ ಎಷ್ಟು?
ಶಿವಮೊಗ್ಗ – 214 ಮಿ.ಮೀ, ಉಡುಪಿ – 210 ಮಿ.ಮೀ, ದಾವಣಗೆರೆ – 195 ಮಿ.ಮೀ, ಉತ್ತರ ಕರ್ನಾಟಕ – 187 ಮಿ.ಮೀ, ಬಳ್ಳಾರಿ – 200 ಮಿ.ಮೀ, ಬೆಳಗಾವಿ – 168 ಮಿ.ಮೀ, ಧಾರವಾಡ – 169 ಮಿ.ಮೀ, ಚಿಕ್ಕಮಗಳೂರು – 96 ಮಿ.ಮೀ, ದಕ್ಷಿಣ ಕನ್ನಡ – 178 ಮಿ.ಮೀ, ಗದಗ – 168 ಮಿ.ಮೀ, ಕೊಡಗು – 160 ಮಿ.ಮೀ, ಹಾವೇರಿ – 145 ಮಿ.ಮೀ.