ಬಾಗಲಕೋಟೆ: ಜಿಲ್ಲೆಯ ಜಮಖಂಡಿ (JamaKhandi) ತಾಲೂಕಿನ ಕೆಲವು ಕಡೆಗಳಲ್ಲಿ ಸೋಮವಾರ ಸಂಜೆ ಬಿರುಗಾಳಿ ಸಹಿತ ಮಳೆಯಿಂದ ಕಟಾವಿಗೆ ಬಂದಿದ್ದ ಬೆಳೆಗಳು ನೆಲಕ್ಕುರುಳಿದೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಕೇಶವ್ ಜಾಧವ್, ಅನೀಲ್ ಬಬಲೇಶ್ವರ, ಉಮೇಶ್ ಜಾಧವ್, ಶಿವಾಜಿ ಜಾಧವ್ ಎಂಬುವವರ ಒಣದ್ರಾಕ್ಷಿ ಘಟಕಗಳಿಗೆ ಗಾಳಿ ಸಹಿತ ಮಳೆಯಿಂದ ಹಾನಿ ಆಗಿದೆ. ಹಾಗೆಯೇ ತೊದಲಬಾಗಿ ಗ್ರಾಮದ ಅಣ್ಣಪ್ಪ ಶಿರಹಟ್ಟಿ ಎನ್ನುವವರ ಜಮೀನಿನಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳ ಗಾಳಿ ಹೊಡೆತಕ್ಕೆ ಸಿಕ್ಕು ನೆಲಕ್ಕಪ್ಪಳಿಸಿದೆ. ಇದನ್ನೂ ಓದಿ: ನಾಗ್ಪುರ ಕೋಮು ಗಲಭೆ – ಮಾಸ್ಟರ್‌ಮೈಂಡ್ ಮನೆ ಮೇಲೆ ಬುಲ್ಡೋಜರ್ ಅಸ್ತ್ರ ಪ್ರಯೋಗ!
ಜಿಲ್ಲೆಯಲ್ಲಿ ಒಂದು ಕಡೆಗೆ ಬೇಸಿಗೆ ಬಿರುಬಿಸಿಲು ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಮತ್ತೊಂದೆಡೆ ತಾಪಮಾನ ಹೆಚ್ಚಾಗಿ ಅಕಾಲಿಕ ಮಳೆ ಆಗುತ್ತಿದ್ದು, ಇದೀಗ ಮಳೆಯ ಜೊತೆ ಗಾಳಿ ಬೀಸುವುದು ಬೆಳೆಗಳಿಗೆ ಕಂಟಕವಾಗುತ್ತಿದೆ. ಗಾಳಿ ಹಾಗೂ ಅಕಾಲಿಕ ಮಳೆಯು ದ್ರಾಕ್ಷಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ: ಸಂವಿಧಾನ ತಿದ್ದುಪಡಿ ಹೇಳಿಕೆ ಡಿಕೆಶಿ ಬಂಡವಾಳ ಬಯಲು ಮಾಡಿದೆ: ಬಿವೈವಿ