ಬೆಂಗಳೂರು: ಧಾರಾಕಾರ ಮಳೆಗೆ (Heavy Rain) ಬಿಎಂಟಿಸಿ ಬಸ್ (BMTC Bus) ಅರ್ಧ ಮುಳುಗಿದ ಘಟನೆ ನಗರದ ಕೀನೋ ಥಿಯೇಟರ್ ಅಂಡರ್ ಪಾಸ್‌ನಲ್ಲಿ ನಡೆದಿದೆ.
ಮಲ್ಲೇಶ್ವರಂ ಲಿಂಕ್ ರಸ್ತೆಯಿಂದ ಮೆಜೆಸ್ಟಿಕ್ ಕಡೆಗೆ ಬರುತ್ತಿದ್ದ ಬಸ್ ಅಂಡರ್‌ಪಾಸ್‌ನಲ್ಲಿದ್ದ (Underpass) ಮಳೆಗೆ ಕೆಟ್ಟು ನಿಂತಿತ್ತು. ಇದರಿಂದ ಪ್ರಯಾಣಿಕರು ಕೆಲಹೊತ್ತು ಪರದಾಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಹೈಗ್ರೌಂಡ್ ಸಂಚಾರಿ ಪೊಲೀಸರು ಭೇಟಿ ನೀಡಿ ಬಸ್ಸಿನಿಂದ ಪ್ರಯಾಣಿಕರನ್ನು ಇಳಿಸಿ ಬಳಿಕ ಮತ್ತೊಂದು ಬಸ್ಸಿನಿಂದ ಕಳುಹಿಸಿಕೊಡಲಾಯಿತು.
Advertisement
Advertisement
ಶೇಷಾದ್ರಿಪುರಂ ಅಂಡರ್‌ಪಾಸ್ ಬಳಿ ನೀರಿನಲ್ಲಿ ಸಿಲುಕಿದ ಬಿಎಂಟಿಸಿ ಬಸ್ ಅರ್ಧ ಮುಳುಗಿತ್ತು. ಬಸ್ ಮುಂದೆ ಚಲಿಸುತ್ತಿದ್ದಂತೆ ಅಪಾಯದ ಮುನ್ಸೂಚನೆ ಅರಿತು ಬಸ್ಸನ್ನು ಚಾಲಕ ಅಲ್ಲೇ ನಿಲ್ಲಿಸಿದ್ದಾರೆ. ಈ ವೇಳೆ ಬಸ್‌ನಲ್ಲಿದ್ದವರನ್ನ ಸ್ಥಳೀಯ ವ್ಯಕ್ತಿ ಮಣಿಕಂಠ ಅವರು ಧಾವಿಸಿ ಪ್ರಯಾಣಿಕರನ್ನು ಹೊರ ಕರೆತಂದಿದ್ದಾರೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆಯ ಎಚ್ಚರಿಕೆ
Advertisement
ರಾಮಕೃಷ್ಣ ಆಶ್ರಮದ ಬಳಿ ಬೃಹತ್ ಮರ ಧರೆಗುಳಿ ಕಾರು ಸಂಪೂರ್ಣ ಜಖಂಗೊಂಡಿದ್ದರೆ ಇತ್ತ ಕೋರಮಂಗಲ ಬಳಿ ಲೈಟ್ ಕಂಬ ಮತ್ತು ಆಟೋ ಮೇಲೆ ಮರ ಮುರಿದ್ದು ಬಿದ್ದು ಭಾರೀ ಅನಾಹುತ ಸೃಷ್ಟಿಮಾಡಿತ್ತು. ಇತ್ತ ಬಸವೇಶ್ವರ ನಗರದ ಹೌಸಿಂಗ್ ಬೋರ್ಡ್ ರಸ್ತೆಯಲ್ಲಿ ಆಟೋ ಮೇಲೆ ಮರಬಿದ್ದು ಸಂಚಾರಕ್ಕೆ ಅಡ್ಡಿಪಡಿಸಿತ್ತು
Advertisement
ಚಾಲುಕ್ಯ ಸರ್ಕಲ್ ಮುಖ್ಯ ರಸ್ತೆಯಲ್ಲಿ ಮರಬಿದ್ದು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ವೇಳೆ ಟ್ರಾಫಿಕ್ ಪೊಲೀಸ್ ಹಾಗೂ ಬಿಬಿಎಂಪಿ ಸಿಬ್ಬಂದಿ ಮರ ತೆರವು ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.