ಬೆಂಗಳೂರು: ಕೇರಳಕ್ಕೆ ಈಗಾಗಲೇ ಮುಂಗಾರು ಪ್ರವೇಶಿಸಿದ ಹಿನ್ನೆಲೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಮಳೆ ಆರಂಭಗೊಂಡಿದೆ. ರಾಜಧಾನಿಯಲ್ಲಿ ವರುಣನ ಆರ್ಭಟ ಜೋರಾಗಿ ಇದ್ದು, ಇಂದು ರಾತ್ರಿ ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಎಡಬಿಡದೆ ಸುರಿದಿದೆ. ಇದನ್ನೂ ಓದಿ: ಮೂಸೆ ವಾಲಾ ಹತ್ಯೆಗೆ ಬಳಸಿದ್ದು ನಿಮಿಷಕ್ಕೆ 1,800 ಬುಲೆಟ್ ಹಾರಿಸುವ ಭಯಾನಕ ರೈಫಲ್- ಇಲ್ಲಿದೆ ಡಿಟೇಲ್ಸ್
ಒಂದು ವಾರದ ಬಳಿಕ ಮತ್ತೆ ನಗರದಲ್ಲಿ ಮಳೆ ಪ್ರಾರಂಭಗೊಂಡಿದೆ. ಮೆಜೆಸ್ಟಿಕ್, ಯಶವಂತಪುರ, ಮಲ್ಲೇಶ್ವರಂ, ಸೇರಿದಂತೆ ಕೆಲ ಭಾಗದಲ್ಲಿ ಮುಂಗಾರು ಪ್ರವೇಶಕ್ಕೂ ಮುನ್ನ ತುಂತುರು ಮಳೆ ಸುರಿದಿದೆ.