ಬೆಂಗಳೂರು: ಸೆಪ್ಟೆಂಬರ್‌ಗೆ ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ಬೆನ್ನಲ್ಲೇ ಬೆಂಗಳೂರಿನಲ್ಲಿ (Bengaluru Rains) ಇಂದು (ಗುರುವಾರ) ಜೋರು ಮಳೆಯಾಗಿದೆ.
ಸಂಜೆಯಾಗುತ್ತಿದ್ದಂತೆ ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗಿದೆ. ಮಲ್ಲೇಶ್ವರಂ, ಮೆಜೆಸ್ಟಿಕ್, ಶೇಷಾದ್ರಿಪುರಂ, ಯಶವಂತಪುರ, ವಿಧಾನಸೌಧ, ಕಬ್ಬನ್ ಪಾರ್ಕ್, ಕಾರ್ಪೋರೇಷನ್, ವಸಂತ ನಗರ, ಸುತ್ತಮುತ್ತ ಜೋರಾದ ಮಳೆಯಾಗಿದೆ. ಇದನ್ನೂ ಓದಿ: Lok Sabha Election: ಈ ಬಾರಿ ಪ್ರತಾಪ್ ಸಿಂಹ ಅವ್ರನ್ನ ಗೆಲ್ಲಿಸಬೇಡಿ – ಸಿದ್ದರಾಮಯ್ಯ ಕರೆ
ಮಳೆ ಜೋರಾದ ಹಿನ್ನೆಲೆ ದ್ವಿಚಕ್ರ ವಾಹನ ಸವಾರರು ಫ್ಲೈಓವರ್‌ಗಳಲ್ಲಿ ಆಶ್ರಯ ಪಡೆದ ದೃಶ್ಯ ಕಂಡುಬಂತು. ದಿಢೀರ್ ಮಳೆಗೆ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡವು. ಹೆಬ್ಬಾಳದಲ್ಲಿ ಮನೆಗಳಿಗೆ ನೀರು ನುಗ್ಗಿತು.
ನೈರುತ್ಯ ಮುಂಗಾರು ವಾರಾಂತ್ಯದಲ್ಲಿ ಮತ್ತೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ದೇಶದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿತ್ತು. ಇದನ್ನೂ ಓದಿ: ರೀಲ್ಸ್‌ನಲ್ಲಿ ಜೈ ಶ್ರೀರಾಮ್ ಎಂದ ಮುಸ್ಲಿಂ ಯುವಕ, ಯುವತಿಗೆ ಬೆದರಿಕೆ – ಆರೋಪಿ ಅರೆಸ್ಟ್
ಸೆಪ್ಟೆಂಬರ್‌ನಲ್ಲಿ ವಾಡಿಕೆ ಮಳೆ ಆಗುವ ಸಾಧ್ಯತೆ ಇದೆ. ಈ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬಿದ್ದರೂ, ಜೂನ್-ಸೆಪ್ಟೆಂಬರ್ ಅವಧಿಯಲ್ಲಿನ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯೇ ಇರಲಿದೆ ಎಂದು ಮಾಹಿತಿ ನೀಡಿದೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]