ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಸಮೀಪದ ಕಸುವನಹಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಗೆ ಮನೆ ಹಾಗೂ ಕೊಟ್ಟಿಗೆಗಳ ಶೀಟ್‍ಗಳು ಹಾರಿ ಹೋಗಿದ್ದು, ಅಪಾರ ನಷ್ಟ ಉಂಟಾಗಿದೆ.
Advertisement
ಕಸುವನಹಳ್ಳಿ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಗ್ರಾಮದಲ್ಲಿ ಹಲವು ಮನೆ, ಕೊಟ್ಟಿಗೆಗಳಿಗೆ ಹೊದಿಸಿದ್ದ ಸಿಮೆಂಟ್ ಶೀಟ್‍ಗಳು ಹಾರಿಹೋಗಿವೆ. ಆಶಾ ಕಾರ್ಯಕರ್ತೆ ಜಯಶ್ರೀಯವರು ಇದೇ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಮನೆಯ ಶೀಟ್ ಕೂಡ ಗಾಳಿಗೆ ಹಾರಿ ಹೋದ ಕಾರಣ ಕುಟುಂಬ ಮಳೆಯಲ್ಲಿಯೇ ನಿಲ್ಲುವಂತಾಗಿದೆ. ಇದನ್ನೂ ಓದಿ: ರೇಪ್ ಕೇಸ್ ದಾಖಲಿಸಲು ಠಾಣೆಗೆ ಹೋದ ಬಾಲಕಿ ಮೇಲೆ ಪೊಲೀಸ್‌ನಿಂದಲೂ ಅತ್ಯಾಚಾರ!
Advertisement
Advertisement
ಆಶಾ ಕಾರ್ಯಕರ್ತೆ ಬಡ ಕುಟುಂಬದವರಾಗಿದ್ದು, ತಾಲೂಕು ಆಡಳಿತ ಅವರಿಗೆ ಪರಿಹಾರ ನೀಡಿ ಮನೆಯ ದುರಸ್ತಿ ಮಾಡಿಸಿಕೊಳ್ಳಲು ಅನುಕೂಲ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಗಾಂಧಿನಗರ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಲಕ್ಷ್ಮೀಕಾಂತ್ ನೇಮಕ