ಬೆಂಗಳೂರು: ಕೆ.ಆರ್.ಪುರಂನಲ್ಲಿ ಭಾರೀ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತದೇಹ 34 ಗಂಟೆಗಳ ಬಳಿಕ ಪತ್ತೆಯಾಗಿದೆ.
ಶಿವಮೊಗ್ಗ ಮೂಲದ ಟೆಕ್ಕಿ ಮಿಥುನ್ ಶುಕ್ರವಾರ ರಾತ್ರಿ ಕೆ.ಆರ್.ಪುರಂನಲ್ಲಿ ಸುರಿದ ರಣಮಳೆಗೆ ಬೈಕನ್ನು ಉಳಿಸಲು ಹೋಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಈ ಪ್ರಕರಣದ ಸಂಬಂಧ ನಿನ್ನೆ ಘಟನಾ ಸ್ಥಳದಿಂದ ಕೆ.ಆರ್.ಪುರದ ಸೀಗೆಹಳ್ಳಿ ಕೆರೆವರೆಗೂ ಎಸ್.ಡಿ.ಆರ್.ಎಫ್ ಸಿಬ್ಬಂದಿ ಶೋಧಕಾರ್ಯ ನಡೆಸಿದ್ದರು. ಸುಮಾರು 2 ಕಿ.ಮೀವರೆಗೂ ರಾಜಕಾಲುವೆಯಲ್ಲಿ ಶೋಧಕಾರ್ಯ ನಡೆಸಿದ್ದರೂ, ಯುವಕನ ದೇಹ ಪತ್ತೆ ಆಗಿರಲಿಲ್ಲ.
Advertisement
Advertisement
ಇಂದು ಸಹ ಯುವಕನ ಪತ್ತೆ ಕಾರ್ಯ ಆರಂಭಿಸಿದ್ದು, ಮನೆಯಿಂದ ಕೇವಲ 500 ಮೀ. ಅಂತರದಲ್ಲೇ ಪೊಲೀಸರು ಮೃತದೇಹವನ್ನು ಹೊರತೆಗೆದಿದ್ದಾರೆ. ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಮೃತದೇಹ ಪತ್ತೆ ಆಗಿದೆ. ಮಿಥುನ್ ಮೃತದೇಹವನ್ನು ಹೊರ ತೆಗೆಯುತ್ತಿದ್ದ, ಹಾಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಬೆಂಗ್ಳೂರಿನ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ – ಇಡೀ ದಿನ ಹುಡುಕಾಡಿದರೂ ಸಿಗದ ಶವ