ಯಾದಗಿರಿ: ಸೋಮವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೊಂದು ಕೊಚ್ಚಿಕೊಂಡು ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮದರಕಲ್ ಗ್ರಾಮದಲ್ಲಿ ನಡೆದಿದೆ.
Advertisement
ಮದರಕಲ್-ಹಯ್ಯಾಳ್ ಬಿ. ಗ್ರಾಮದ ಮಧ್ಯೆ ಹಳ್ಳ ಹರಿದು ಹೋಗಿರುವುದರಿಂದ ಹಳ್ಳಕ್ಕೆ ಅಡ್ಡಲಾಗಿ ಬ್ರಿಡ್ಜ್ ನಿರ್ಮಿಸಲಾಗುತ್ತಿದೆ. ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ಮಣ್ಣಿನ ರಸ್ತೆ ನಿರ್ಮಿಸಲಾಗಿತ್ತು. ಆದ್ರೆ ನಿನ್ನೆ ರಾತ್ರಿ ಸುರಿದ ಬಿರುಗಾಳಿ ಭಾರೀ ಮಳೆಗೆ ಹಳ್ಳದ ನೀರು ರಭಸವಾಗಿ ಹರಿದು ಬಂದಿರುವುದರಿಂದ ತಾತ್ಕಾಲಿಕ ಮಣ್ಣಿನ ರಸ್ತೆ ಕೊಚ್ಚಿಕೊಂಡು ಹೋಗಿದೆ.
Advertisement
Advertisement
ರಸ್ತೆ ಕೊಚ್ಚಿಕೊಂಡ ಹೋಗಿದ್ದರಿಂದ ಮದರಕಲ್ ಗ್ರಾಮಸ್ಥರು ಹಯ್ಯಾಳ್ ಗ್ರಾಮ ಸೇರಿದಂತೆ ಜಮೀನಿಗೆ ತೆರಳಲು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯು ವಿಳಂಭವಾಗಿ ಸಾಗುತ್ತಿದ್ದು ಕೂಡಲೇ ಬ್ರಿಡ್ಜ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಅಲ್ಲದೇ ತಾತ್ಕಾಲಿಕವಾಗಿ ಕೂಡಲೇ ಮಣ್ಣಿನ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಮದರಕಲ್ ಗ್ರಾಮಸ್ಥ ರಾಜು ಸಿಂಧೆ ಒತ್ತಾಯಿಸಿದ್ದಾರೆ.
Advertisement
Web Stories