– ಗ್ರಾಮೀಣ ಜನಜೀವನ ಸಂಪೂರ್ಣ ಅಸ್ತವ್ಯಸ್ತ
ಯಾದಗಿರಿ: ಜಿಲ್ಲೆಯಲ್ಲಿ ಮಳೆಯ ಅವಾಂತರಕ್ಕೆ ಗ್ರಾಮೀಣ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ರಾತ್ರಿಯಿಡೀ ವರುಣ ಅಬ್ಬಿರಿಸಿ ಬೊಬ್ಬಿರಿದಿದ್ದು, 75.5 ಎಂಎಂ ಮಳೆ ಸುರಿದಿದೆ.
Advertisement
ಭಾರೀ ಮಳೆಗೆ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳದ ಕೆರೆ ತುಂಬಿದೆ. ಪರಿಣಾಮ ಕೆರೆಯ ಕಟ್ಟೆಯ ಮೇಲಿಂದ ನೀರು ಹರಿದು ಗ್ರಾಮಕ್ಕೆ ನುಗ್ಗುತ್ತಿದೆ. ಇದರಿಂದಾಗಿ ಕೆರೆ ತೀರದ ಮನೆಗಳು ಜಲಾವೃತಗೊಂಡಿವೆ. ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯ – ರಣಭೀಕರ ಪ್ರವಾಹಕ್ಕೂ ನಲುಗದ ಶಿವಲಿಂಗ, ನಂದಿ ವಿಗ್ರಹ
Advertisement
Advertisement
ಬಲಶೆಟ್ಟಿಹಾಳ ಮತ್ತು ಗೆದ್ದಮರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಸಹ ಜಲಾವೃತಗೊಂಡಿದ್ದು, ಎರಡು ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದೆ. ಕೆರೆ ತುಂಬಿದ್ದರಿಂದ ಅಪಾರ ಪ್ರಮಾಣದ ನೀರು ಗ್ರಾಮಕ್ಕೆ ಹರಿದು ಬರುತ್ತಿದೆ.