– ಇಂದು ಎಲ್ಲೆಲ್ಲಿ ಆರೆಂಜ್, ಯೆಲ್ಲೋ ಅಲರ್ಟ್?
ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಮುಂಗಾರು ಚುರುಕು ಪಡೆಯುತ್ತಿದ್ದು, ಇಂದಿನಿಂದ ಜೂನ್ 12ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather Department) ನೀಡಿದೆ.
ಕಳೆದೊಂದು ವಾರದಿಂದ ರಾಜ್ಯದ ಎಲ್ಲಾ ಭಾಗದಲ್ಲೂ ಅಬ್ಬರದ ಮಳೆಯಾಗುತ್ತಿದೆ. ಇದೀಗ ಇಲಾಖೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಅಲರ್ಟ್‍ಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯದ 7 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ. ಒಟ್ಟು 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ನೀಡಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.
Advertisement
Advertisement
ಎಲ್ಲೆಲ್ಲಿ ಇಂದು ಆರೆಂಜ್ ಅಲರ್ಟ್?: ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಮುಂದಿನ 3 ಗಂಟೆಗಳ ಕಾಲ 30-40 ಕಿಮೀ ವೇಗದಲ್ಲಿ ಗಾಳಿ, ಮಳೆಯಾಗುವ ಸಾಧ್ಯತೆಗಳಿವೆ.
Advertisement
ಎಲ್ಲೆಲ್ಲಿ ಇಂದು ಯೆಲ್ಲೋ ಅಲರ್ಟ್?: ದಕ್ಷಿಣ ಕನ್ನಡ, ಗದಗ, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಭಾರೀ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು – ಜನರಲ್ಲಿ ಹರ್ಷವೋ ಹರ್ಷ
Advertisement
ನಿನ್ನೆಯ ಮಳೆಗೆ ಬೆಂಗ್ಳೂರಲ್ಲಿ ಏನೇನಾಗಿದೆ?: ಬೆಂಗಳೂರಿನಲ್ಲಿ ಮಳೆಯ ಹಿನ್ನೆಲೆ 447 ಮರಗಳು ಧರೆಗೆ ಉರುಳಿವೆ. ಕೇವಲ ಆರು ದಿನದಲ್ಲಿ 447 ಮರಗಳು ಮತ್ತು 800 ಕ್ಕೂ ಮರದ ಕೊಂಬೆಗಳು ಧರಶಾಹಿಯಾಗಿವೆ. 447 ರಲ್ಲಿ 376 ಮರಗಳನ್ನ ತೆರವು ಮಾಡಲಾಗಿದ್ದು, 71 ಮರಗಳನ್ನ ತೆರವು ಮಾಡಬೇಕಾಗಿದೆ.
1,573 ಕ್ಕೂ ಹೆಚ್ಚು ಮರದ ಸಮಸ್ಯೆಗಳಿಗೆ ಸಂಬಂಧಿಸಿದ ಕರೆಗಳು ಬಂದಿವೆ. 905 ಸಮಸ್ಯೆಗಳನ್ನ ಬಗೆಹರಿಸಲಾಗಿದೆ 695 ಬಾಕಿ ಇವೆ. ಈಗಾಗಲೇ ಬಿಬಿಎಂಪಿಯ ಅರಣ್ಯ ಘಟಕ ವಿಭಾಗದವರು ನಿರಂತರವಾಗಿ ಮರ ತೆರವು ಕಾರ್ಯಾಚರಣೆಯನ್ನ ಮಾಡಲಾಗ್ತಿದೆ. ಮರ ಬೀಳುವ ಸಂಖ್ಯೆ ಹೆಚ್ಚಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಹಳೆಯ ಮರಗಳ ತೆರವಿಗೆ ಪ್ಲ್ಯಾನ್ ಮಾಡಲಾಗ್ತಿದೆ. ನಿರಂತರ ಮಳೆಯಿಂದ ಯಾರ ಮೇಲೆ ಮರ ಬೀಳುತ್ತೋ, ಎಲ್ಲಿ ಬೀಳುತ್ತೋ ಎಂಬ ಆತಂಕ ಸಾರ್ವಜನಿಕರಿಗೆ ಹೆಚ್ಚಾಗಿದೆ.