ಬಳ್ಳಾರಿ: ಒಂದು ಗಂಟೆ ಸುರಿದ ಧಾರಾಕಾರ ಮಳೆಗೆ (Rain) ಬಳ್ಳಾರಿಯ (Ballari) ಹಲವೆಡೆ ಬೃಹತ್ ಮರಗಳು (Tree) ಹಾಗೂ ವಿದ್ಯುತ್ ಕಂಬಗಳು (Electric Pole) ಧರೆಗೆ ಉಳಿದ್ದರಿಂದ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು.
ನಗರದ ಹೊಸಪೇಟೆ ಹಾಗೂ ಸಿರಗುಪ್ಪ ರಸ್ತೆಯಲ್ಲಿ ಮರಗಳು ಬಿದ್ದಿದ್ದರೆ ಬೆಂಗಳೂರು ರಸ್ತೆಯಲ್ಲಿ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ; ರಾಯಚೂರಲ್ಲಿ ಸಿಡಿಲಿಗೆ ಇಬ್ಬರು ಬಲಿ
ರಸ್ತೆಗೆ ಅಡ್ಡಲಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಅರ್ಧ ಗಂಟೆಗೂ ಅಧಿಕ ಕಾಲ ಸಂಚಾರ ಸಂಪೂರ್ಣ ಅಸ್ತವ್ಯಸ್ತ ಆಗಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನ ಸಂಚಾರಿ ಪೊಲೀಸರು ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಆರಂಭವಾಯಿತು. ಇದನ್ನೂ ಓದಿ: ದೆಹಲಿಯಲ್ಲಿ ಯುವಕನ ಬರ್ಬರ ಕೊಲೆ – ಲೇಡಿ ಡಾನ್ ಜಿಕ್ರಾ ತಂಡದಿಂದ ಕೃತ್ಯ