ಉಡುಪಿ: ಜಿಲ್ಲೆಯ ಹಲವು ಕಡೆ ಧಾರಾಕಾರ ಮಳೆ ಶುರುವಾಗಿದೆ. ವಾಯು ಚಂಡ ಮಾರುತದ ಪ್ರಭಾವದಿಂದ ಜೂನ್ ಆರಂಭದಲ್ಲಿ ಭಾರೀ ಮಳೆ ಬಿದ್ದಿತ್ತು. ಆ ನಂತರ ಒಂದು ವಾರ ಮಳೆ ದೂರವಾಗಿತ್ತು.
Advertisement
ಇದೀಗ ಕಳೆದ ಎರಡು ದಿನದಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ರಾತ್ರಿ ಮಳೆಯಾಗುತಿತ್ತು. ಇಂದು ಮುಂಜಾನೆಯಿಂದ ಧಾರಾಕಾರವಾಗಿ ವರ್ಷಧಾರೆಯಾಗುತ್ತಿದೆ. ಜಿಲ್ಲೆಯ ಕುಂದಾಪುರದಲ್ಲಿ ಅತೀ ಹೆಚ್ಚು ಮಳೆ ಬಿದ್ದಿದೆ. ಕಳೆದ 24 ಗಂಟೆಯಲ್ಲಿ ಸುಮಾರು 45 ಮಿಲಿಮೀಟರ್ ಮಳೆ ಕುಂದಾಪುರದಲ್ಲೇ ಆಗಿದೆ. ಉಡುಪಿ ಮತ್ತು ಕಾರ್ಕಳ ಜಿಲ್ಲೆಯಲ್ಲಿ ಸರಾಸರಿ 25 ಮಿಲಿ ಮೀಟರ್ ಮಳೆ ಬಿದ್ದಿದೆ. ಬೈಂದೂರು- ಹೆಬ್ರಿ- ಕಾಪುನಲ್ಲೂ ಸಾಧಾರಣ ಮಳೆಯಾಗಿದೆ.
Advertisement
Advertisement
ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ಇದೆ. ಹವಾಮಾನ ಇಲಾಖೆಯ ಪ್ರಕಾರ ಜೂನ್ 22ರ ನಂತರ ಭಾರೀ ಮಳೆ ಬೀಳುತ್ತದೆ ಎಂದು ಮುನ್ಸೂಚನೆ ಇದೆ. ವಾತಾವರಣ ಈ ಸೂಚನೆಗೆ ಪೂರಕವಾಗಿದೆ. ಮಳೆಯಾದ್ರೆ ಕಡಲು ಪ್ರಕ್ಷುಬ್ಧವಾಗುವ ಸಾಧ್ಯತೆಯಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
Advertisement
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]