Bengaluru CityDistrictsKarnatakaLatestMain Post

ರಾಜ್ಯದಲ್ಲಿ ನಾಳೆಯವರೆಗೆ ಭಾರೀ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ನಾಳೆಯವರೆಗೆ ಭಾರೀ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಆಗಲಿದ್ದು, ಕಡಲಿಗೆ ಮೀನುಗಾರರು ಇಳಿಯದಂತೆ ಸೂಚಿಸಲಾಗಿದೆ.

ಬೆಂಗಳೂರಿನಲ್ಲೂ ಇನ್ನೆರಡು ದಿನ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಆಗುವ ಸಂಭವ ಇದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರಿದಿದೆ. ನಿನ್ನೆ ಯಲ್ಲಾಪುರ ತಾಲೂಕಿನ ಪನಸಗುಳಿಯಲ್ಲಿ ಗಂಗಾವಳಿ ನದಿಯಲ್ಲಿ ಲಾರಿಯೊಂದು ತೇಲಿ ಹೋಗಿದೆ. ಇದನ್ನೂ ಓದಿ: ನೀರಿನಲ್ಲಿ ಕೊಚ್ಚಿಹೋದ ಲಾರಿ – ಓರ್ವ ನಾಪತ್ತೆ, ಐವರ ರಕ್ಷಣೆ

ಲಾರಿಯಲ್ಲಿದ್ದ ಐವರ ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ತಾತ್ಕಾಲಿಕ ಸೇತುವೆ ಮೇಲೆ ನೀರು ಹರಿಯುತ್ತಿದ್ದರೂ ಚಾಲಕ ದುಸ್ಸಾಹಸಕ್ಕೆ ಮುಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ. ಇನ್ನುಳಿದಂತೆ ಮೈಸೂರು, ರಾಮನಗರ, ಚಾಮರಾಜನಗರ, ಕೋಲಾರದಲ್ಲೂ ಉತ್ತಮ ಮಳೆ ಆಗಿದೆ. ಯಾದಗಿರಿಯಲ್ಲಿ ಸುರಿದ ಮಳೆಗೆ ಪಿಡಬ್ಲ್ಯೂಡಿ ಕಚೇರಿ ಆವರಣಕ್ಕೆ ನೀರು ನುಗ್ಗಿತ್ತು. ಇಂದು ಮತ್ತು ನಾಳೆ ಹೆಚ್ಚು ಮಳೆಯಾಗುವ ಸಾಧ್ಯತೆ ಬಗ್ಗೆ ಈಗಾಗಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ ಎರಡು ವಾರಗಳಿಂದ ಬಿಡುವು ನೀಡಿದ್ದ ಮಳೆ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮತ್ತೆ ಆರ್ಭಟ ಆರಂಭಿಸಿದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ

Live Tv

Leave a Reply

Your email address will not be published.

Back to top button