ಆನೇಕಲ್: ಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಡಾವಣೆಯೊಂದು ಸಂಪೂರ್ಣ ಜಲಾವೃತವಾಗಿರುವ ಘಟನೆ ಬೆಂಗಳೂರು ಹೊರವಲಯದಲ್ಲಿ ಕಂಡು ಬಂದಿದೆ.
ಆನೇಕಲ್ ತಾಲೂಕಿನ ಹಾರಗದ್ದೆ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರೋ ವೀನಸ್ ಕೌಂಟಿ ಬಡಾವಣೆ ಕಳೆದ ಎರಡು ದಿನ ಸುರಿದ ಮಳೆಗೆ ಸಂಪೂರ್ಣ ಜಲಾವೃತವಾಗಿದೆ. ಮಳೆಯ ನೀರಿನ ಜೊತೆಗೆ ಜಿಗಣಿ ಕೈಗಾರಿಕಾ ಪ್ರದೇಶದ ಕೊಳಚೆ ನೀರು ಸೇರಿ ಇಡೀ ಬಡಾವಣೆಯೇ ಗಬ್ಬುನಾರುತ್ತಿದೆ. ಈ ಸಮಸ್ಯೆಗೆ ಬಡಾವಣೆಯ ನಿರ್ಮಿಸಿದವರ ಅವೈಜ್ಞಾನಿಕ ಒಳಚರಂಡಿ ನಿರ್ಮಾಣ ಹಾಗೂ ಬಡಾವಣೆ ಪಕ್ಕದಲ್ಲಿದ್ದ 40 ಅಡಿ ರಾಜಕಾಲುವೆಯನ್ನು 20 ಅಡಿಯಷ್ಟು ಕಿರಿದು ಮಾಡಿರೋದು ಕಾರಣವಾಗಿದೆ. ದಲಿತರ ಬಗ್ಗೆ ಮಾತನಾಡಿದ್ರೆ ಮುಂದಿನ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕಾಗುತ್ತೆ: ಮುನಿಸ್ವಾಮಿ
ಕೇವಲ 2 ದಿನದ ಮಳೆಗೆ ಬಡಾವಣೆಯ ರಸ್ತೆಗಳು ಪಾರ್ಕ್ ಕೊಳಚೆ ನೀರಿನಿಂದ ತುಂಬಿಹೋಗಿದ್ದು ಇದೆ ನೀರಿನಲ್ಲಿ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ರೋಗದ ಭೀತಿ ಇಲ್ಲಿನ ಬಡಾವಣೆ ನಿವಾಸಿಗಳನ್ನು ಕಾಡುತ್ತಿದೆ. ಮಳೆ ನೀರು ಬಡಾವಣೆಗೆ ನುಗ್ಗಿದ್ದರಿಂದ ಬೈಕ್ ಕಾರುಗಳು ನೀರಿನಲ್ಲಿ ಮುಳುಗಿದ್ದು ದುರಸ್ತಿ ಮಾಡಲಾಗದಷ್ಟು ಹಾಳಾಗಿವೆ. ಈ ಸಂಬಂಧ ಬಡಾವಣೆ ನಿವಾಸಿಗಳು ಹಾರಗದ್ದೆ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಅವರ ಇದು ನಮ್ಮ ಕೆಲಸವಲ್ಲ ಎಂದು ಸ್ಥಳೀಯರು ದೂರಿದ್ದಾರೆ.