ಬೆಂಗಳೂರು: ರಾಜ್ಯದಲ್ಲಿ ಮುಂದಿನ ಐದು ದಿನ ಹಗುರದಿಂದ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಮೋಡ ಕವಿದ ವಾತಾವರಣ ಇದ್ದು, ತುಂತುರು ಮಳೆ ಆಗಲಿದೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯಯಭಾರ ಕುಸಿತ ಕಾಣಿಸಿಕೊಳ್ಳಲಿದೆ. ಅಕ್ಟೋಬರ್ 10 ರಂದು ಉತ್ತರ ಅಂಡಮಾನ್ ಸಮುದ್ರದಲ್ಲಿ ವಾಯುಭಾರ ಕುಸಿತ ಕಾಣಿಸಿಕೊಳ್ಳಲಿದೆ. ಹೀಗಾಗಿ ಮುಂದಿನ ಐದು ದಿನ ಮಳೆ ಆಗಲಿದೆ. ಇದನ್ನೂ ಓದಿ: ದೇವೆಗೌಡ್ರು ಹುಟ್ಟುವ ಮೊದಲೇ RSS ಅಸ್ತಿತ್ವದಲ್ಲಿತ್ತು: ಕೆ.ಎಸ್ ಈಶ್ವರಪ್ಪ
Advertisement
ಆಂಧ್ರಪ್ರದೇಶದ ಕರಾವಳಿ ಭಾಗದಿಂದ ಮೇಲ್ಮೈ ಸುಳಿಗಾಳಿ ಆರಂಭ ಆಗಿ ರಾಜ್ಯದ ಹಲವೆಡೆ ಮಳೆಯಾಗಲಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ನಾಡು ಜಿಲ್ಲೆಗಳಲ್ಲಿ ಜಾಸ್ತಿ ಆಗಬಹುದು ಎಂದು ನೈಸರ್ಗಿಕ ಮತ್ತು ಪ್ರಾಕೃತಿಕ ವಿಕೋಪ ಇಲಾಖೆ ಹವಾಮಾನ ತಙ್ಞ ಸದಾನಂದ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾನು ಎಲ್ಲರಿಗಿಂತ ಸೀನಿಯರ್, ಅರ್ಧ ಬೆಂಗಳೂರು ಉಸ್ತುವಾರಿ ಕೊಡಲಿ: ಸೋಮಣ್ಣ
Advertisement
Advertisement
ಅಕ್ಟೋಬರ್ 13 ರವರೆಗೂ ಬೆಂಗಳೂರಲ್ಲಿ ಮಳೆಯಾಗಲಿದೆ. ಬೆಳಗ್ಗೆಯಿಂದ ಬೆಂಗಳೂರಿನಲ್ಲಿ 8.4 ಮಿ.ಮಿ ಮಳೆ ದಾಖಲಾಗಿದೆ. ನಾಳೆ ಹಾಗೂ ನಾಡಿದ್ದು ಬೆಂಗಳೂರು ಗ್ರಾಮಾಂತರ ಭಾಗಗಳಲ್ಲಿ ಹೆಚ್ಚಿನ ಮಳೆ ಸಾಧ್ಯತೆ ಇದೆ. ಬೆಂಗಳೂರು ನಗರ ಭಾಗದಲ್ಲಿ ನಾಳೆ ನಾಡಿದ್ದು, ಇದೇ ವಾತಾವರಣ ಮುಂದಿವರೆಯಲಿದೆ. 12 ಹಾಗೂ 13 ರಂದು ಹೆಚ್ಚಿನ ಮಳೆಯಾಗಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರಕ್ಕೆ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ತಜ್ಞರಾದ ಸದಾನಂದ ಅಡಿಗ ಹೇಳಿದ್ದಾರೆ.