ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರಾತ್ರಿ ಮಳೆ ತನ್ನ ಆರ್ಭಟ ನಡೆಸಿದೆ. ರಾತ್ರಿಯಿಡೀ ಸುರಿದ ಮಳೆಗೆ ಸಿಲಿಕಾನ್ ಸಿಟಿ ಮಂದಿ ಹೈರಾಣಾಗಿದ್ದಾರೆ.
Advertisement
ಗೌರಿ-ಗಣೇಶ ಹಬ್ಬಕ್ಕೆ ಮಳೆರಾಯ ಅಡ್ಡಿ ಪಡಿಸಲಿದ್ದಾನೆ. ಭಾರೀ ಮಳೆಗೆ ಶಾಪಿಂಗ್ ಹಾಟ್‍ಸ್ಪಾಟ್ ಮಲ್ಲೇಶ್ವರಂನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿದೆ. ಮಳೆಗೆ ಶಿವಾನಂದ ಸರ್ಕಲ್ ಕೆರೆಯಂತಾಗಿದೆ. ಮಾರ್ಕೆಟ್ ಸಂಪೂರ್ಣ ಮಳೆ ನೀರಿನಿಂದ ಮುಳುಗಡೆಯಾಗಿದೆ. ಚಂದ್ರಲೇಔಟ್, ಸುಲ್ತಾನ್‍ಪೇಟೆ, ಕೆಂಗೇರಿ, ಕಗ್ಗಲೀಪುರ, ಟೌನ್‍ಹಾಲ್‍ನಲ್ಲಿ ಮಳೆ ಅವಾಂತರವಾಗಿದೆ. ಅನುಗ್ರಹ ಲೇಔಟ್‍ನಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಜಲಾವೃತವಾಗಿದೆ.
Advertisement
Advertisement
ಸ್ಮಾರ್ಟ್ ಸಿಟಿ ಯೋಜನೆ ಅಡಿ ನಿರ್ಮಿಸಿರುವ ರಿಚ್ಮಂಡ್ ರಸ್ತೆಯಲ್ಲಿಯ ತುಂಬೆಲ್ಲಾ ಮಳೆ ನೀರು ತುಂಬಿ ಹರಿಯುತ್ತಿತ್ತು. ಅವೈಜ್ಞಾನಿಕವಾಗಿ ಕಾಲುವೆಗೆ ನೀರು ಹೋಗದ ರೀತಿ ರಸ್ತೆ ನಿರ್ಮಿಸಿದ್ದೇ ಇದಕ್ಕೆ ಕಾರಣವಾಗಿದೆ. ಯಶವಂತಪುರದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ವಾಹನ ಸಂಚಾರ ಇಲ್ಲದ ಕಾರಣ ಭಾರೀ ಅನಾಹುತವೊಂದು ತಪ್ಪಿದೆ. ಇದನ್ನೂ ಓದಿ: ಕೋಲಾರ ಗಣೇಶೋತ್ಸವ – ರಾತ್ರಿ 10 ಗಂಟೆ ಬಳಿಕ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶವಿಲ್ಲ
Advertisement
ಮತ್ತೊಂದೆಡೆ ಕಾರವಾರ ಭಾಗದಲ್ಲಿ ಮಳೆ ಮುಂದುವರಿದಿದ್ದು ಮತ್ತೆ ಅಣಶಿ ಘಟ್ಟದಲ್ಲಿ ಗುಡ್ಡ ಕುಸಿತ ಮುಂದುವರಿದಿದೆ. ಭಾರೀ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅನುವು ಮಾಡಲಾಗಿದೆ. ಇದನ್ನೂ ಓದಿ: ತಮ್ಮ ನಾಯಕರು ಬ್ಲೂಫಿಲಂ ನೋಡ್ತಿದ್ದಾಗ ಬಿಜೆಪಿ ಮಹಿಳೆಯರು ಎಲ್ಲಿದ್ರು – ಮಹಿಳಾ ಕಾಂಗ್ರೆಸ್ ತಿರುಗೇಟು
ಇನ್ನೂ ಕೊಡಗಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ ಮತ್ತು ಚಾಮರಾಜನಗರದಲ್ಲಿ ವರುಣಾರ್ಭಟ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕಲ್ಯಾಣ ಮಂಟಪ, ಬಂಕ್, ಮನೆಗಳಿಗೆ ನೀರು ನುಗ್ಗಿ ಅಪಾರ ನಷ್ಟವುಂಟಾಗಿದೆ. ಉಳಿದಂತೆ ರಾಯಚೂರಿನಲ್ಲಿ ಭಾರಿ ಮಳೆ ಜಿಲ್ಲೆಯ ರೈತರನ್ನ ಕಂಗೆಡಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆಗಳು ನೀರುಪಾಲಾಗಿವೆ. ಶಾಲಾ ಆವರಣ ಕೆರೆಯಂತಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.