ಬೆಂಗಳೂರಿನಲ್ಲಿ ಮಳೆ ಅವಾಂತರ – ಗೋಡೆ ಕುಸಿದು ಮಹಿಳೆ ಸಾವು

Public TV
2 Min Read
bangaluru rain
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ರಾತ್ರಿ ಹೊತ್ತು ಧಾರಾಕಾರ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

bangaluru rain 1

ಶುಕ್ರವಾರ ತಡ ರಾತ್ರಿ ಮಹದೇವಪುರ ವಲಯದಲ್ಲಿ 90 ರಿಂದ 180 ಮಿಲಿಮೀಟರ್‌ವರೆಗೆ ಮಳೆಯಾಗಿದೆ. 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೆ.ಆರ್ ಪುರಂ ಭಾಗದಲ್ಲಿ ಮಳೆರಾಯ ಆರ್ಭಟಿಸಿದ್ದು, ಕಾವೇರಿ ನಗರದಲ್ಲಿ ಗೋಡೆ ಕುಸಿದು ಮುನಿಯಮ್ಮ(55) ಎಂಬವರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಮನೆಯಲ್ಲಿದ್ದ ಮತ್ತಿಬ್ಬರಿಗೆ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಮಹದೇವಪುರ ವಲಯ ಬಿಬಿಎಂಪಿ ಜಂಟಿ ಆಯುಕ್ತ ವೆಂಕಟಚಲಪತಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಇದನ್ನೂ ಓದಿ: ಉಗ್ರರಿಂದ ಪೊಲೀಸ್ ಅಧಿಕಾರಿಯ ಮನೆಗೆ ನುಗ್ಗಿ ಹತ್ಯೆ

ಗಾಯತ್ರಿ ಬಡಾವಣೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಹಿಡಿದುಕೊಳ್ಳಲು ಹೋದ 24 ವರ್ಷದ ಮಿಥುನ್ ನಾಪತ್ತೆ ಆಗಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ. ಇದೀಗ ಅಗ್ನಿಶಾಮಕ ಸಿಬ್ಬಂದಿ, ಎನ್‍ಡಿಆರ್‌ಎಫ್ ತಂಡ ಸ್ಥಳಕ್ಕೆ ಆಗಮಿಸಿ ಶೋಧ ನಡೆಸುತ್ತಿದ್ದಾರೆ. ಸ್ನೇಹಿತರ ಜೊತೆ ವಾಸವಿದ್ದ ಶಿವಮೊಗ್ಗ ಮೂಲದ ಮಿಥುನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದನ್ನೂ ಓದಿ: 2023ರ ಚುನಾವಣೆಗೆ ಬಿಜೆಪಿ ಸಜ್ಜು- ಕೋಟೆನಾಡಿಗೆ ಇಂದು ಜೆ.ಪಿ. ನಡ್ಡಾ ಭೇಟಿ

ಮತ್ತೊಂದೆಡೆ ಕಲ್ಕೆರೆ ಗ್ರಾಮ ಜಲಾವೃತವಾಗಿದ್ದು, ಮನೆಗಳಿಗೆ ನೀರು ನುಗ್ಗಿ ಸುಮಾರು 1 ಕಿ.ಮೀ.ವರೆಗೆ ನಿಂತಿದೆ. ಕೆ.ವಿ ಲೇಔಟ್ ಸಂಪೂರ್ಣ ಮುಳುಗಿದೆ. 20ಕ್ಕೂ ಹೆಚ್ಚು ಮನೆಗಳ ವಸ್ತುಗಳೆಲ್ಲಾ ನೀರು ಪಾಲಾಗಿದೆ. ರಾತ್ರಿಯಿಡೀ ನೀರು ಹೊರಹಾಕುವುದರಲ್ಲಿ ಜನ ಜಾಗರಣೆ ಮಾಡಿದ್ದರು.

ಕೃಷ್ಣ ಚಿತ್ರಮಂದಿರದ ಗೋಡೆ ಕುಸಿದು 24 ಬೈಕ್‍ಗಳು ಜಖಂ ಆಗಿದೆ. ಚಾರ್ಲಿ ಸಿನಿಮಾ ಸೆಕೆಂಡ್ ಶೋ ನೋಡಲು ಬಂದಿದ್ದ ಜನ, ಕಾಂಪೌಂಡ್ ಬಳಿ ಬೈಕ್ ಪಾರ್ಕ್ ಮಾಡಿದ್ದರು. ಸ್ಥಳಕ್ಕೆ ಸ್ಥಳೀಯ ಶಾಸಕ ಸಚಿವ ಬೈರತಿ ಬಸವರಾಜ್‌ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಯಾರೂ ಭಯ ಪಡಬೇಡಿ. ಸರ್ಕಾರವಿದೆ ಎಂದು ತಿಳಿಸಿದರು. ಈ ಮಧ್ಯೆ ಕಳೆದ ತಿಂಗಳ 17ರಂದೇ ಹೊರಮಾವು ಸಾಯಿಲೇಔಟ್ ಮುಳುಗಿದ್ದಾಗ ಸಿಎಂ ಬಸವರಾಜ ಬೊಮ್ಮಾಯಿ ಅಷ್ಟದಿಕ್ಪಾಲಕರಿಗೆ ಮಳೆ ಅವಾಂತರ ನಿರ್ವಹಣೆ ಹೊರಿಸಿದ್ದರು.

Live Tv

Share This Article
Leave a Comment

Leave a Reply

Your email address will not be published. Required fields are marked *