ಕೋಲಾರ: ಜಿಲ್ಲೆಯ ಹಲವೆಡೆ ಗುರುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆಯಾಗಿದೆ.
ಕೋಲಾರ (Kolara), ಶ್ರೀನಿವಾಸಪುರ ಕ್ಷೇತ್ರದ ಹಲವು ಕಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಭಾರೀ ಮಳೆ (Rain) ಸುರಿದಿದೆ. ಇದನ್ನೂ ಓದಿ: ನಾನು ಭವಿಷ್ಯ ನುಡಿದಂತೆ ರೈಲು ದುರಂತ ಆಗಿದೆ; ದೇಶಕ್ಕೆ ಇನ್ನೊಂದು ಗಂಡಾಂತರ ಕಾದಿದೆ – ಕೋಡಿ ಮಠ ಶ್ರೀ ಭವಿಷ್ಯ
ಗುಡುಗು, ಬಿರುಗಾಳಿ ಸಹಿತ ಮಳೆಯಿಂದ ತರಕಾರಿ ತೋಟಗಳಿಗೆ (Vegetable farming) ಹಾನಿಯಾಗಿದೆ. ಮಾವು ಬೆಳೆಗಾರರಿಗೆ ಕಾಯಿ ಉದುರುವ ಭೀತಿ ಎದುರಾಗಿದೆ.
ಇನ್ನೂ ಎರಡು ದಿನಗಳ ಕಾಲ ಕೋಲಾರ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆಯಿದ್ದು ರೈತರು ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವಂತೆ ಕೃಷಿ ಇಲಾಖೆ ಸೂಚನೆ ನೀಡಿದೆ.