– ಕ್ಯಾಬ್, ಟ್ಯಾಕ್ಸಿ ಸಿಗದೆ ಟ್ರ್ಯಾಕ್ಟರ್ ಹತ್ತಿದ ಯುವತಿಯರು
ಬೆಂಗಳೂರು: ಬೆಂಬಿಡದೆ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು ಏರ್‌ಪೋರ್ಟ್ ರಸ್ತೆಯಲ್ಲಿ ಭಾರೀ ಅವಾಂತರವೇ ಸೃಷ್ಟಿಯಾಗಿತ್ತು. ಏರ್‌ಪೋರ್ಟ್ ರಸ್ತೆಯಲ್ಲಿ ನೀರು ನಿಂತು ಮಿನಿ ಕೆರೆಯಂತಾಗಿತ್ತು. ರಸ್ತೆಯ ಎರಡೂ ಬದಿಯಲ್ಲೂ ನೀರು ರಭಸವಾಗಿ ಹರಿಯುತ್ತಿತ್ತು.
Advertisement
ಏರ್‌ಪೋರ್ಟ್ ಟರ್ಮಿನಲ್‍ಗೆ ನೀರು ನುಗ್ಗಿದ ಪರಿಣಾಮ ಪ್ರಯಾಣಿಕರು ಪರದಾಡುವಂತಾಯ್ತ. ಏರ್‌ಪೋರ್ಟ್ ರಸ್ತೆಯಲ್ಲಿ ಮೊಣಕಾಲಿನವರೆಗೂ ನೀರು ನಿಂತಿತ್ತು. ಪರಿಣಾಮ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯ್ತು. ಒಂದ್ಕಡೆ ಮಳೆಯಾದರೆ, ಮತ್ತೊಂದ್ಕಡೆ ಕ್ಯಾಬ್, ಆಟೋಗಳು ಸರಿಯಾದ ಸಮಯಕ್ಕೆ ಸಿಗದೆ ಪ್ರಯಾಣಿಕರು ಪರದಾಡಿದ್ರು. ಕೆಲ ಪ್ರಯಾಣಿಕರು ಮನೆ ಸೇರಿದ್ರೆ ಸಾಕಪ್ಪ ಅಂತ ಟ್ರ್ಯಾಕ್ಟರ್‍ನಲ್ಲೇ ಲಗೇಜು ಹಾಕಿಕೊಂಡು ಪ್ರಯಾಣ ಮಾಡಿದ್ರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ನಿಲ್ಲದ ಉಗ್ರರ ಅಟ್ಟಹಾಸ- ಸೇನಾಧಿಕಾರಿ ಸೇರಿ ನಾಲ್ವರು ಯೋಧರು ಹುತಾತ್ಮ
Advertisement
Advertisement
ನಿನ್ನೆ ಸಂಜೆಯಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಯ್ತು. ಏರ್‌ಪೋರ್ಟ್ ರಸ್ತೆಯಲ್ಲಿ ಜನರು ಗಂಟೆ ಗಟ್ಟಲೇ ಮಳೆಯಲ್ಲಿಯೇ ಕಾಯುತ್ತಿದ್ದ ದೃಶ್ಯ ಕಂಡು ಬಂತು. ದೇವನಹಳ್ಳಿ ಪಟ್ಡಣದಲ್ಲೂ ಭಾರೀ ಮಳೆಯಾಗಿದೆ. ಕೇಂಪೇಗೌಡ ವೃತ್ತ ಜಲಾವೃತವಾಗಿ ಕೆರೆಯಂತಾಗಿತ್ತು. ರಾಷ್ಟ್ರೀಯ ಹೆದ್ದಾರಿಯಿಂದ ದೇವನಹಳ್ಳಿ ನಗರದೊಳಗೆ ಸಂಪರ್ಕಿಸುವ ವೃತ್ತದಲ್ಲಿ ನೀರು ನಿಂತು ಬೈಕ್, ಕಾರು ಎಲ್ಲಾ ಮುಳುಗಿದ್ರೆ, ಮಳೆ ನೀರಿನಲ್ಲಿ ತರಕಾರಿಗಳು ಕೊಚ್ಚಿ ಹೋದವು. ಇದನ್ನೂ ಓದಿ: ರಾಜ್ಯದ ಜನರ ದುಡ್ಡು ದೋಚ್ತಿವೆ ಚೀನಿ ಆ್ಯಪ್‍ಗಳು – ಶೇರ್, ಲೈಕ್ ಕೊಡ್ತಿದ್ರೆ ಹುಷಾರಾಗಿರಿ