ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ರಾಜ್ಯದಲ್ಲಿ ಟ್ರಫ್ ನಿಂದಾಗಿ (ವಾತಾವರಣದಲ್ಲಿ ಗಾಳಿಯ ಚಲನೆಯಿಂದ ಉಂಟಾಗುವ ಪರಿಣಾಮ) ದಕ್ಷಿಣ ಒಳನಾಡಿನಲ್ಲಿ ಇಂದು ಬೆಳಗ್ಗೆ ಭಾರೀ ಮಳೆಯಾಗಿದೆ. ರಾಜ್ಯದಲ್ಲೇ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲೂಕಿನ ಬಿ.ಸಿಹಳ್ಳಿಯಲ್ಲಿ ಗರಿಷ್ಟ 120 ಮಿ.ಮೀ ಮಳೆಯಾಗಿದೆ.
ಇಂದು ಬೆಳಗ್ಗೆ 5 ಗಂಟೆ ಸುಮಾರಿಗೆ ಆರಂಭವಾದ ಮಳೆ 8 ಗಂಟೆಯವರೆಗೆ ನಿರಂತರವಾಗಿ ಸುರಿದಿತ್ತು. ಜಡಿ ಮಳೆಯ ಜೊತೆ ಗಾಳಿ, ಮಿಂಚು, ಗುಡುಗು ಇದ್ದ ಕಾರಣ ಹಲವೆಡೆ ನೀರು ನುಗ್ಗಿದೆ. ರಸ್ತೆ ಕುಸಿದಿದ್ದು ಮರಗಳು ಧರೆಗೆ ಉರುಳಿವೆ.
Advertisement
Advertisement
ಜಿಲ್ಲೆಗಳ ಪೈಕಿ ಅತಿ ಹೆಚ್ಚು ಎಲ್ಲಿ?
ಮೈಸೀರಿನ ಟಿ ನರಸೀಪುರ ತಾಲೂಕಿನ ಬಿ.ಸಿಹಳ್ಳಿಯಲ್ಲಿ 120 ಮಿ.ಮೀ, ಬೆಂಗಳೂರು ನಗರ ಆನೇಕಲ್ ತಾಲೂಕಿನ ಹುಸ್ಕೂರಿನಲ್ಲಿ 110 ಮಿ.ಮೀ, ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಕೂಡಿಗೆಹಳ್ಳಿಯಲ್ಲಿ 107 ಮಿ.ಮೀ, ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಮೂಖಹಳ್ಳಿಯಲ್ಲಿ 101.5 ಮಿ.ಮೀ, ಮಂಡ್ಯ ಶ್ರೀರಂಗಪಟ್ಟಣದ ಬಲ್ಲೆಕೆರೆಯಲ್ಲಿ 93.7 ಮಿ.ಮೀ, ಕೋಲಾರದ ಮಾಲೂರು ತಾಲೂಕಿನ ಕುಡಿಯನೂರ್ ನಲ್ಲಿ 89 ಮಿ.ಮೀ, ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಬೈಚಾಪುರ 82 ಮಿ..ಮೀ. ರಾಮನಗರದ ಕನಕಪುರದ ದೊಡ್ಡಲಹಳ್ಳಿ 66.3 ಮಿ.ಮೀ ಮಳೆಯಾಗಿದೆ.
Advertisement
Advertisement
ಬೆಂಗಳೂರಿನಲ್ಲಿ ಎಲ್ಲಿ ಎಷ್ಟು ಮಿ.ಮೀ ಮಳೆಯಾಗಿದೆ?
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹುಸ್ಕೂರಿನಲ್ಲಿ 110 ಮಿ.ಮೀ ಮಳೆ ಸುರಿದಿದೆ. ಕೊನಪ್ಪನ ಅಗ್ರಹಾರ 90, ಹೆಗ್ಗೆನಹಳ್ಳಿ 88.5, ದಾಸರಹಳ್ಳಿ – ಹೆಗ್ಗೇನಹಳ್ಳಿ 88.5, ಬೊಮ್ಮನಹಳ್ಳಿ 83.5, ದಾಸರಹಳ್ಳಿ ಪೀಣ್ಯ ಕೈಗಾರಿಕಾ ವಲಯ 83, ಕೋರಮಂಗಲ 81.5, ಬೇಗೂರು ದಕ್ಷಿಣ 80.5, ದೊಮ್ಮಲೂರು 79.5, ವೀದ್ಯಪೀಠ 77 ಮಳೆಯಾಗಿದೆ.