Connect with us

Bengaluru City

ಬೆಂಗಳೂರಿನಲ್ಲಿ ಭಾರೀ ಮಳೆ – ಮುಳುಗಿತು ಕಾರು, ರಸ್ತೆಯಲ್ಲಿ ನದಿಯಂತೆ ಹರಿಯುತ್ತಿದೆ ನೀರು

Published

on

ಬೆಂಗಳೂರು: ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ಪೀಣ್ಯ, ಕುಮಾರಸ್ವಾಮಿ ಲೇಔಟ್‌, ಬನಶಂಕರಿ,  ಜಾಲಹಳ್ಳಿ, ಬಸವೇಶ್ವರ ನಗರ, ಮೆಜೆಸ್ಟಿಕ್, ಮಾಗಡಿ ರಸ್ತೆ ಸುತ್ತಮುತ್ತ ಧಾರಾಕಾರ ಮಳೆಯಾಗಿದೆ.

ಸಂಜೆ ಹೊತ್ತಿಗೆ ಬಿದ್ದ ಭಾರೀ ಮಳೆ ಬೆಂಗಳೂರಿನ ಹಲವೆಡೆ ಸಮಸ್ಯೆಗಳನ್ನು ತಂದೊಡ್ಡಿದೆ. ನಗರದ ಕೆಳ ಸೇತುವೆಗಳಲ್ಲಿ ಸಾಕಷ್ಟು ಪ್ರಮಾಣದ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ಸವಾರರು ಪರದಾಡುತ್ತಿದ್ದಾರೆ.

ಹೊಸಕೆರೆಹಳ್ಳಿಯ ದತ್ತಾತ್ರೇಯ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ಒಡೆದು ಮನೆಗಳಿಗೆ ನೀರು ನುಗ್ಗಿದ್ದು, ನೀರಿಗೆ ಬೈಕ್‍,  ಕಾರುಗಳು ಸಂಪೂರ್ಣ ಮುಳುಗಡೆಯಾಗಿದೆ. ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯಿಂದ ಹೊರ ಬರಲು ಪರದಾಡುತ್ತಿದ್ದಾರೆ.

ದತ್ತಾತ್ರೇಯ ದೇವಸ್ಥಾನದ ಹಿಂಭಾಗ ಪ್ರದೇಶ ಕೆರೆಯಂತಾಗಿದೆ. ಸದ್ಯಕ್ಕೆ ಬಂದಿರುವ ಮಾಹಿತಿಯ ಪ್ರಕಾರ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಿಂದ ಹೊರ ಪರದಾಡುತ್ತಿರುವ ಜನ ಮನೆಗಳ ಮೇಲಿಂದ ನಿಂತು ರಕ್ಷಣೆ ಮಾಡುವಂತೆ ಮನವಿ ಮಾಡುತ್ತಿದ್ದಾರೆ.

ಆರ್.ಆರ್.ನಗರದ ರಸ್ತೆಗಳು ಜಲಾವೃತಗೊಂಡಿದೆ. ಮೊನ್ನೆಯಷ್ಟೇ ಆರ್‍ಆರ್ ನಗರದಲ್ಲಿ ಭಾರೀ ಮಳೆ ಸುರಿದಿತ್ತು. ಈಗ ರಸ್ತೆಯಲ್ಲಿ ನೀರು ನದಿಯಂತೆ ಹರಿಯುತ್ತಿದೆ. ಓಕಳಿಪುರಂ ಅಂಡರ್‌ ಪಾಸ್‌ನಲ್ಲಿ  ಸಂಜೆಯ ಮಳೆಯಿಂದ ನೀರು ಮೂರಡಿ ಎತ್ತರದವರೆಗೆ ತುಂಬಿಕೊಂಡಿದೆ.

ಚಾಲುಕ್ಯ ಸರ್ಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ರಾಜಕಾಲುವೆ ತುಂಬಿ ಹರಿಯುತ್ತಿದ್ದು, ಅಪಾಯದ ಸುಳಿಯಲ್ಲಿ ಪ್ರಮೋದ್ ಲೇಔಟ್ ಜನರಿದ್ದಾರೆ. ರಾಜಕಾಲುವೆಯಲ್ಲಿ ಇನ್ನೂ ಒಂದು ಅಡಿಯಷ್ಟು ನೀರು ಜಾಸ್ತಿಯಾದರೂ ಕೊಳಚೆ ನೀರು ಮನೆಗೆ ನುಗ್ಗುವ ಸಾಧ್ಯತೆಯಿದೆ.

Click to comment

Leave a Reply

Your email address will not be published. Required fields are marked *

www.publictv.in