ತಿರುವನಂತಪುರಂ: ಭಾರೀ ಮಳೆಗೆ ಕೇರಳದಲ್ಲಿ ಮತ್ತೆ ಸಂಕಷ್ಟ ಎದುರಾಗಿದ್ದು, ಶಾಲಾ ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ. ಅಲ್ಲದೇ ಭಾನುವಾರ ಮಧ್ಯಾಹ್ನ 3 ಗಂಟೆವರೆಗೂ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಬಂದ್ ಮಾಡಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಕೇರಳದ ವರಿಯಾರ್ ನದಿ ಅಪಾಯದ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿರುವ ಕಾರಣ ಕೊಚ್ಚಿ ವಿಮಾನ ನಿಲ್ದಾಣದ ರನ್‍ವೇ ನೀರು ನಿಂತಿದೆ. ಮೊದಲು ಶುಕ್ರವಾರ ವರೆಗೂ ಮಾತ್ರ ವಿಮಾನ ನಿಲ್ದಾಣ ಬಂದ್ ಮಾಡಲಾಗಿತ್ತು. ಆದರೆ ನೀರಿನ ಪ್ರವಾಹದ ಪ್ರಮಾಣ ಕಡಿಮೆಯಾಗದ ಪರಿಣಾಮ ಭಾನುವಾರದವರೆಗೂ ವಿಮಾನ ನಿಲ್ದಾಣವನ್ನು ಬಂದ್ ಮಾಡಲಾಗಿದೆ ಎಂದು ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕೃತ ಫೇಸ್‍ಬುಕ್ ಖಾತೆಯಲ್ಲಿ ತಿಳಿಸಿದ್ದಾರೆ.
Advertisement
Advertisement
ಕೇರಳ ಸರ್ಕಾರ ತ್ರಿಶೂರು, ಮಲಪ್ಪುರಂ, ಕೊಯಿಕ್ಕೋಡ್, ವಯನಾಡು, ಕಾಸರಗೋಡು, ಎರ್ನಾಕುಲಂ, ಇಡುಕ್ಕಿ, ಕಣ್ಣೂರು, ಪಾಲಕ್ಕಾಡ್‍ನಲ್ಲಿ ಜಿಲ್ಲೆಗಳಲ್ಲಿ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ಜಿಲ್ಲೆಗಳಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಣೆ ಮಾಡಲು ಎನ್‍ಡಿಆರ್ ಎಫ್ ತಂಡಗಳು ಕಾರ್ಯಾಚರಣೆ ನಡೆಸಿದೆ.
Advertisement
#WATCH A house collapsed in Kalpetta in Kerala following heavy rainfall in the region, earlier today. The house was empty when the incident occurred. pic.twitter.com/n6gi024VR3
— ANI (@ANI) August 8, 2019
Advertisement
ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ವಯನಾಡು ಜಿಲ್ಲೆಯ ಮೆಪ್ಪಾಡಿಯ ಪುಥುಮಲದಲ್ಲಿ ನಿನ್ನೆ ಗುಡ್ಡ ಕುಸಿತದಿಂದಾದ ಪ್ರವಾಹಕ್ಕೆ ಊರಿಗೆ ಊರೇ ಕಣ್ಮರೆ ಆಗಿದೆ. ದೇವಸ್ಥಾನ ಮತ್ತು ಮಸೀದಿಯೊಂದು ಸಾಕ್ಷ್ಯವೇ ಇಲ್ಲದಂತೆ ನೆಲಸಮವಾಗಿದೆ. ಪುಥಮಲದಲ್ಲಿದ್ದ ಮನೆ ಮತ್ತು ಎರಡು ಕಾಟೇಜ್‍ಗಳು ಕೂಡಾ ಕೊಚ್ಚಿಕೊಂಂಡು ಹೋಗಿವೆ. ಈ ಕಾಟೇಜ್‍ಗಳಲ್ಲಿರುವ ಟೀ ಎಸ್ಟೇಟ್ ಕಾರ್ಮಿಕರೂ ಕಣ್ಮರೆ ಆಗಿದ್ದಾರೆ. 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಶಂಕೆ ಎದುರಾಗಿದೆ.