ಯಾದಗಿರಿ: ಯಾದಗಿರಿ (Yadgir) ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿ, ಬೊಬ್ಬಿರಿದಿದ್ದಾನೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದಾಗಿ, ಜಿಲ್ಲೆಯ ರೈತರು (Farmers) ಫುಲ್ ಖುಷ್ ಆಗಿದ್ದಾರೆ.
ಕಳೆದ 15 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದರು. ಹಿಂಗಾರು ಮಳೆಯನ್ನ (Rain) ನಂಬಿ ಬಿತ್ತನೆ ಮಾಡಿದ್ದ ರೈತರು, 15 ದಿನಗಳಿಂದ ಮಳೆ ಇಲ್ಲದೇ ಬೆಳೆ ಒಣಗುವ ಸ್ಥಿತಿ ಬಂದೊದಗಿತ್ತು. ಆದರಿಂದು ಜಿಲ್ಲೆಯಾದ್ಯಂತ ಉತ್ತಮ ಮಳೆ ಆಗಿರುವುದು ರೈತರ ಮುಖದಲ್ಲಿ ಮಂದಹಾಸ ತರಿಸಿದೆ. ಇದನ್ನೂ ಓದಿ: ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲಾ ಹಳದಿಯೇ: ಕಾಂಗ್ರೆಸ್ ಗೇಲಿಗೆ ಬಿಜೆಪಿ ತಿರುಗೇಟು
Advertisement
Advertisement
ಕಾಲುವೆಗೆ ನೀರು ಹರಿಸಲು ಒತ್ತಾಯ:
ಮತ್ತೊಂದೆಡೆ ನಾರಾಯಣಪುರ ಜಲಾಶಯದಿಂದ (Narayanpura Reservoir) ಕಾಲುವೆಗೆ ನೀರು ಹರಿಸದ ಹಿನ್ನೆಲೆಯಲ್ಲಿ ರಾಯಚೂರಿನ ದೇವದುರ್ಗದಲ್ಲಿ ರೈತರು ರಸ್ತೆ ತಡೆ ನಡೆಸಿ ನೀರಿಗಾಗಿ ಹೋರಾಟ ನಡೆಸಿದ್ದಾರೆ. ಇತ್ತೀಚಿಗೆ ನಡೆದ ನೀರಾವರಿ ಸಲಹಾ ಸಮಿತಿಯ ತೀರ್ಮಾನ ರೈತರಿಗೆ ಸಂಪೂರ್ಣ ವ್ಯತಿರಿಕ್ತವಾಗಿದೆ ಅಂತ ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆ.28 ರಿಂದ 30 ರವರೆಗೆ ಮೈಸೂರು ಜಿಲ್ಲಾಡಳಿತ ಅಧಿಕಾರಿಗಳು ರಜೆ ಹಾಕುವಂತಿಲ್ಲ: ಜಿಲ್ಲಾಧಿಕಾರಿ ಸೂಚನೆ
Advertisement
Advertisement
ಯಾವುದೇ ಮುನ್ಸೂಚನೆಯಿಲ್ಲದೇ ನಾರಾಯಣಪುರ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ನೀರು ಬಂದ್ ಮಾಡಿದ್ದಾರೆ. ಇದರಿಂದ ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆಯಬೇಕಾದ ಮೆಣಸಿನಕಾಯಿ, ಭತ್ತದ ಸಸಿ ಹಚ್ಚುವ ಕೆಲಸಗಳು ವಿಳಂಬವಾಗಿವೆ. ರೈತರು ಆತಂಕಗೊಂಡಿದ್ದಾರೆ. ಕೆಲ ರೈತರು ನೀರಿಲ್ಲದೇ ಈಗಾಗಲೇ ನಾಟಿ ಮಾಡಿದ ಸಸಿ ಕಿತ್ತುಹಾಕಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Web Stories