ಯಾದಗಿರಿಯಲ್ಲಿ ತಡರಾತ್ರಿವರೆಗೂ ಭಾರೀ ಮಳೆ- ಮಹಿಳೆ ಸಾವು, ಜನಜೀವನ ಅಸ್ತವ್ಯಸ್ತ

Public TV
1 Min Read
YADAGIRI RAIN

ಯಾದಗಿರಿ: ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿವರೆಗೂ ಸುರಿದ ಗಾಳಿ ಸಹಿತ ಭಾರೀ ಮಳೆಯ ಅವಾಂತರಕ್ಕೆ ಜನ-ಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಜಿಲ್ಲೆಯ ಯಾದಗಿರಿ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಶ್ವೇತಾ ರಾಠೋಡ್ ಮೃತ ಮಹಿಳೆ. ಭಾನುವಾರ ಸಂಜೆ ಸುರಿದ ಧಾರಕಾರ ಮಳೆಯಲ್ಲೇ ಶ್ವೇತಾ ರಾಠೋಡ್ ನೀರು ತರಲು ಹೋಗಿದ್ದಾರೆ. ಈ ವೇಳೆ ಶ್ವೇತಾ ಮೇಲೆ ಮರ ಬಿದ್ದು ಗಂಭೀರವಾಗಿ ಗಾಯಗೊಂಡಿದ್ರು.

ಗಂಭೀರ ಗಾಯಗೊಂಡ ಶ್ವೇತರನ್ನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ನಾಲತವಾಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮಹಿಳೆ ಉಸಿರು ಚೆಲ್ಲಿದ್ದಾರೆ. ಈ ಸಂಬಂಧ ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ: ಮಂಗಳೂರಿನಲ್ಲಿ ನಡುರಸ್ತೆಯಲ್ಲೇ ಯುವಕರಿಂದ ನಮಾಜ್- ವೀಡಿಯೋ ವೈರಲ್

ತಪ್ಪಿದ ಭಾರೀ ಅನಾಹುತ: ತಡರಾತ್ರಿವರೆಗೂ ಸುರಿದ ಮಳೆಯಿಂದ ಯಾದಗಿರಿ (yadagiri Rain) ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ಮನೆಯೊಂದರ ಇಡೀ ಮೇಲ್ಛಾವಣಿ ಕುಸಿದು ಬಿದ್ದಿದೆ. ತೆಗ್ಗೆಳ್ಳಿ ಗ್ರಾಮದ ಭೀರಪ್ಪ ಪೂಜಾರಿ ಹಾಗೂ ಸುರೇಶ್ ಕಲ್ಮನಿ ಎಂಬವರಿಗೆ ಸೇರಿದ ಮನೆ ಇದಾಗಿದೆ. ಅದೃಷ್ಟವಶಾತ್ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನೆಯಿಂದ ಮನೆಯಲ್ಲಿದ್ದ ದವಸ-ಧಾನ್ಯಗಳು ಸಂಪೂರ್ಣ ಹಾಳಾಗಿವೆ.

Share This Article