ವಿಜಯಪುರ | ಭಾರಿ ಮಳೆ – ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು

Public TV
0 Min Read
Vijayapura Rain

ವಿಜಯಪುರ: ಬಸವನ ಬಾಗೇವಾಡಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಪಟ್ಟಣದ ಲಕ್ಷ್ಮೀ ನಗರ, ರಾಯಣ್ಣ ವೃತ್ತದ ಬಳಿಯ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಆವಾಂತರ ಸೃಷ್ಟಿಸಿದೆ. ಮಳೆಯಿಂದಾಗಿ ಮನೆಯಲ್ಲಿದ್ದ ಧಾನ್ಯಗಳು ನೀರುಪಾಲಾಗಿವೆ.

ಮನೆಗೆ ನೀರು ನುಗ್ಗಿ ಮನೆಯಲ್ಲಿದ್ದ ಸಾಮಗ್ರಿಗಳು ನೀರು ಪಾಲಾಗಿದ್ದು, ಮಹಿಳೆ ಕಣ್ಣೀರು ಹಾಕಿದ್ದಾಳೆ. ಇತ್ತ ಕೆರೆ ಪಕ್ಕದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ವೃದ್ಧೆ ಪರದಾಡಿದ್ದಾಳೆ. ಯುವಕನೊಬ್ಬ ವೃದ್ಧೆಯನ್ನ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಬಿಟ್ಟ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದೆ.

Share This Article