ಬಳ್ಳಾರಿ: ವಿಜಯನಗರ (Vijanagara) ಜಿಲ್ಲೆಯಾದ್ಯಂತ ಬಿರುಗಾಳಿ (Rain) ಸಹಿತ ಸುರಿದ ಭಾರೀ ಮಳೆಗೆ ಹತ್ತಾರು ಎಕರೆಯಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಾಳೆ ಬೆಳೆ ನೆಲಕಚ್ಚಿದೆ.
ಹೊಸಪೇಟೆಯ ಹೊಸೂರು ಮಾಗಾಣಿಯಲ್ಲಿ ಒಂದೇ ತಿಂಗಳಿನಲ್ಲಿ ಕೈಗೆ ಬರುತ್ತಿದ್ದ ಬಾಳೆಗೊನೆಗಳು (Banana Tree) ನೆಲಕ್ಕುರುಳಿವೆ. ಒಂದು ಕೆಜಿಗೆ 18-20 ರೂ. ಬಾಳೆ ಮಾರಾಟ ಮಾಡುತ್ತಿದ್ದ ರೈತರೀಗಿಗ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಇದನ್ನೂ ಓದಿ: ಒಂದೇ ಮಳೆಗೆ ಬೆಂಗಳೂರಿನ ಹಲವೆಡೆ ಅವಾಂತರ – ಎಲ್ಲೆಲ್ಲಿ ಎಷ್ಟು ಮಳೆ?
ಕಳೆದ ಬಾರಿಯೂ ಇದೇ ರೀತಿ ಬಾಳೆ ತೋಟ ನೆಲಕ್ಕೆ ಉರುಳಿ ಬಿದ್ದಿತ್ತು. ನೆಲಕ್ಕೆ ಉರುಳಿದ ಬಾಳೆ ಗೊನೆಗಳು ಸಂಪೂರ್ಣ ಕಟಾವಿಗೆ ಬಂದಿದ್ದವು. ಪ್ರತಿಬಾರಿ ಹೀಗೆ ಆದರೆ ನಮ್ಮ ಜೀವನ ಹೇಗೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಳೆದ ಬಾರಿಯೂ ಬಾಳೆ ಬೆಳೆ ಬಿದ್ದಾಗ ಅಧಿಕಾರಿಗಳು ಶಾಸಕರು ಬಂದರು. ಆದರೆ ನಮಗೆ ಒಂದು ರೂಪಾಯಿ ಪರಿಹಾರ ನೀಡಲಿಲ್ಲ. ಈ ಬಾರಿಯೂ ಪರಿಹಾರ ಸಿಗುತ್ತೋ ಇಲ್ವೋ ಗೊತ್ತಿಲ್ಲ ಎಂದು ಬಾಳೆ ಬೆಳೆ ಕಳೆದುಕೊಂಡ ರೈತ ಮಾರುತಿ ನೋವು ತೋಡಿಕೊಂದ್ದಾರೆ. ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ಚುರುಕುಗೊಂಡ ಚಂಡಮಾರುತ – ಒಂದು ವಾರ ರಾಜ್ಯದಲ್ಲಿ ಗಾಳಿ ಸಹಿತ ಮಳೆ