ಬಳ್ಳಾರಿ: ಬಿರುಗಾಳಿ ಸಹಿತ ಮಳೆಯ ಹೊಡೆತಕ್ಕೆ 9 ಎಕರೆ ಪಪ್ಪಾಯ (Papaya) ತೋಟ ಸಂಪೂರ್ಣ ನಾಶವಾಗಿರುವ ಘಟನೆ ವಿಜಯನಗರ (Vijayanagar) ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಜಾತಿ-ಜಾತಿಗಳು, ಧರ್ಮಗಳ ನಡುವೆ ಬಿರುಕು ಮೂಡಿಸೋ ಕೆಲಸ ಬಿಡಬೇಕು: ವಿಜಯೇಂದ್ರ
ತಡರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ಪಪ್ಪಾಯ ತೋಟ ಸಂಪೂರ್ಣ ಹಾಳಾಗಿದೆ. ಸಿದ್ದೇಶ ಎಂಬುವವರಿಗೆ ಸೇರಿದ್ದ 9 ಎಕರೆ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯ ಸಂಪೂರ್ಣ ನೆಲಕಚ್ಚಿದ್ದು, ರೈತನಿಗೆ ದಿಕ್ಕು ತೋಚದಂತಾಗಿದೆ.
- Advertisement3
- Advertisement
ನೆಲಬೊಮ್ಮನಹಳ್ಳಿ, ಚಂದ್ರಶೇಖರಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, ರೈತರಿಗೆ ಲಕ್ಷಾಂತರ ರೂ. ನಷ್ಟವಾಗಿದೆ.ಇದನ್ನೂ ಓದಿ: ರೀಲ್ಸ್ ಕೇಸ್: ‘ಬಿಗ್ ಬಾಸ್’ ರಜತ್ ಮತ್ತೆ ಅರೆಸ್ಟ್, ವಿನಯ್‌ಗೂ ಬಂಧನ ಭೀತಿ