ಕಾರವಾರ: ಉತ್ತರ ಕನ್ನಡ (Utttara Kannada) ಜಿಲ್ಲೆಯಾದ್ಯಂತ ಭಾರೀ ಮಳೆ (Rain) ಸುರಿಯುತ್ತಿದ್ದು ಹೊನ್ನಾವರದ (Honnavara) ಭಾಸ್ಕೇರಿ ಬಳಿ ಗುಡ್ಡ ಕುಸಿದಿದೆ. ದೊಡ್ಡ ಕಲ್ಲುಬಂಡೆ ಹೆದ್ದಾರಿಗೆ ಉರುಳಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 206 (National Highway 206) ಸಂಚಾರ ಬಂದ್ ಆಗಿದೆ.
ಹೊನ್ನಾವರ -ಸಾಗರ-ಬೆಂಗಳೂರು ಮಾರ್ಗ ಬಂದ್ ಆಗಿದ್ದು ಬಸ್ ಹಾಗೂ ಭಾರೀ ಗಾತ್ರದ ವಾಹನ ಸಂಚಾರಕ್ಕೆ ತಡೆಯುಂಟಾಗಿದೆ. ರಸ್ತೆಯ ಒಂದು ಭಾಗದಲ್ಲಿ ದ್ವಿಚಕ್ರ ವಾಹನ ತೆರಳಲು ಮಾತ್ರ ಅವಕಾಶವಿದ್ದು ಈಗ ಬೆಂಗಳೂರು (Bengaluru) ಕಡೆ ತೆರಳುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ – ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ
Advertisement
Advertisement
ಸದ್ಯ ಹೆದ್ದಾರಿಗೆ ಬಿದ್ದ ಕಲ್ಲುಬಂಡೆಯನ್ನು ತೆರವುಗೊಳಿಸಲು ತಡವಾಗುತ್ತಿದ್ದು ಕಾರ್ಯಾಚರಣೆ ಇನ್ನೂ ಪ್ರಾರಂಭವಾಗಬೇಕಿದೆ. ಮತ್ತಷ್ಟು ಗುಡ್ಡ ಕುಸಿಯುವ ಸಾಧ್ಯತೆ ಇದ್ದು ಕಾರ್ಯಾಚರಣೆ ಅಡ್ಡಿಯಾಗುವ ಸಾಧ್ಯತೆಯಿದೆ.